alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ತ್ರಿವಳಿ ತಲಾಖ್ ನೀಡಿ ಟೆರೆಸ್ ನಿಂದ ತಳ್ಳಿದ ಪತಿ

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಲ್ಲದೆ ಅವಳನ್ನು ಟೆರೆಸ್ ನಿಂದ ಕೆಳಕ್ಕೆ ತಳ್ಳಿದ್ದಾನೆ. ಮಹಿಳೆಯ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ.

5  ವರ್ಷಗಳ ಹಿಂದೆ ಶಾಮ್ ಮೊಹಮ್ಮದ್ ಎಂಬಾತ ನರ್ಗಿಸ್ ಪರ್ವೀನ್ ಳನ್ನು ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಪದೇ ಪದೇ ವರದಕ್ಷಿಣೆ ತರುವಂತೆ ಮೊಹಮ್ಮದ್ ಪತ್ನಿಯನ್ನು ಪೀಡಿಸುತ್ತಿದ್ದ. 3 ಲಕ್ಷ ರೂಪಾಯಿ ತರುವಂತೆ ಹಿಂಸಿಸುತ್ತಿದ್ದ. ತವರಿನಿಂದ ಹಣ ತರಲಿಲ್ಲ ಎಂಬ ಕೋಪಕ್ಕೆ ನರ್ಗಿಸ್ ಳನ್ನು ಥಳಿಸಿದ್ದಾನೆ. ನಂತರ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ.

ಅಷ್ಟಕ್ಕೇ ಸುಮ್ಮನಾಗದೆ ಮನೆಯ ಮೊದಲ ಮಹಡಿಯಿಂದ ಆಕೆಯನ್ನು ಕೆಳಕ್ಕೆ ತಳ್ಳಿದ್ದಾನೆ. ಸದ್ಯ ನರ್ಗಿಸ್ ಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪತಿಯ ವಿರುದ್ಧ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...