alex Certify
ಕನ್ನಡ ದುನಿಯಾ       Mobile App
       

Kannada Duniya

500 ಆಮೆಗಳು ಗಂಗಾ ನದಿ ಸೇರಲು ಕಾರಣವೇನು ಗೊತ್ತಾ….?

ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಭಾರತ ಸರ್ಕಾರ ಸಾಕಷ್ಟು ಪ್ರಯತ್ನ ಮಾಡ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಮಲಿನವಾಗಿರುವ ನದಿಗಳಲ್ಲಿ ಗಂಗಾ ನದಿ 6ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಗಂಗಾ ನದಿಯನ್ನು ಸ್ವಚ್ಛ ಮಾಡಲು ವಿನೂತನ ಯೋಜನೆ ಹಮ್ಮಿಕೊಂಡಿದೆ.

ಸದ್ಯದಲ್ಲೇ 500 ಆಮೆಗಳನ್ನು ಗಂಗಾನದಿಯಲ್ಲಿ ಬಿಡಲಾಗುತ್ತದೆ. ಜಲಚರಗಳು ನದಿಯಲ್ಲಿರುವ ಕೊಳಕನ್ನು ಶುದ್ಧ ಮಾಡುತ್ತವೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ಆಮೆಗಳನ್ನು ನದಿಗೆ ತಂದು ಬಿಡಲು ಸರ್ಕಾರ ನಿರ್ಧರಿಸಿದೆ. ಅರ್ಧಂಬರ್ಧ ಸುಟ್ಟ ಮೃತದೇಹಗಳನ್ನೆಲ್ಲ ಗಂಗಾನದಿಯಲ್ಲಿ ತೇಲಿಬಿಡಲಾಗುತ್ತಿದೆ.

ಅಂದಾಜಿನ ಪ್ರಕಾರ 3000 ಮಿಲಿಯನ್ ಲೀಟರ್ ಚರಂಡಿ  ನೀರು ಗಂಗಾ ನದಿಯನ್ನುಸೇರುತ್ತಿದೆ. ನದಿಯ ಇಕ್ಕೆಲಗಳಲ್ಲಿರುವ ಕೈಗಾರಿಕೆಗಳಿಂದ ಹೊರಬರುವ ರಾಸಾಯನಿಕ ತ್ಯಾಜ್ಯ ಕೂಡ ನದಿಯನ್ನು ಸೇರುತ್ತಿದೆ. ಇದರಿಂದಾಗಿ ನೀರು ಸಂಪೂರ್ಣ ಗಬ್ಬೆದ್ದು ಹೋಗಿದ್ದು, ಆಮೆಗಳನ್ನು ಬಿಡುವುದರಿಂದ ನದಿ ನೈಸರ್ಗಿಕವಾಗಿಯೇ ಸ್ವಚ್ಛವಾಗುತ್ತದೆ ಅನ್ನೋದು ಸರ್ಕಾರದ ವಾದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...