alex Certify
ಕನ್ನಡ ದುನಿಯಾ       Mobile App
       

Kannada Duniya

ಪಡೆದ ಸಾಲಕ್ಕೆ ಬಡ್ಡಿ ಕೊಡದ ಮಹಿಳೆಯ ಸಜೀವ ದಹನ

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿರೋ ಜಜೌಲಿ ಎಂಬ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬಳನ್ನು ಸಜೀವ ದಹನ ಮಾಡಲಾಗಿದೆ. 45 ವರ್ಷದ ರೇಷ್ಮಾ ದೇವಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸ್ತಿದ್ದಾಳೆ. ಆಕೆ 20,000 ರೂಪಾಯಿ ಸಾಲ ಪಡೆದಿದ್ದಳಂತೆ.

ಹಣವನ್ನು ವಾಪಸ್ ಕೂಡ ಕೊಟ್ಟಿದ್ದಾಳೆ. ಆದ್ರೆ ಸಾಲ ಕೊಟ್ಟಿದ್ದ ವ್ಯಕ್ತಿ ಬಡ್ಡಿ ಕೊಡುವಂತೆ ಆಕೆಯನ್ನು ಪೀಡಿಸುತ್ತಿದ್ದ. ರೇಷ್ಮಾ ನಿರಾಕರಿಸಿದ್ದರಿಂದ ಇಂತಹ ಅಮಾನುಷ ಕೃತ್ಯ ಎಸಗಲಾಗಿದೆ. ನಾಲ್ಕೈದು ಜನರ ಗುಂಪೊಂದು ರೇಷ್ಮಾಳ ಮನೆಗೆ ಬಂದಿತ್ತು.

ರೇಷ್ಮಾಳ ಮೈಮೇಲೆ ಸೀಮೆಎಣ್ಣೆ ಸುರಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿರುವ ರೇಷ್ಮಾಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...