alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಬ್ಬಂದಿಯಿಂದ ಪಾದರಕ್ಷೆ ಸ್ವಚ್ಛ ಮಾಡಿಸಿಕೊಂಡ ಬಿಜೆಪಿ ಸಚಿವ

ಕಾಲಕಾಲಕ್ಕೆ ಪ್ರಪಂಚ ಬದಲಾದರೂ ಈ ರಾಜಕಾರಣಿಗಳು ಬದಲಾಗುವುದೇ ಇಲ್ಲವೇನೋ? ಉತ್ತರ ಪ್ರದೇಶದ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅವರು ಸಾರ್ವಜನಿಕವಾಗಿ ತಮ್ಮ ಸಿಬ್ಬಂದಿಯಿಂದ ಪಾದರಕ್ಷೆಗಳನ್ನು ಸ್ವಚ್ಛ ಮಾಡಿಸಿಕೊಂಡಿದ್ದಾರೆ.

ಸಚಿವರ ಈ ನಡೆ ದೇಶಾದ್ಯಂತ ಚರ್ಚೆಯಾಗಿದೆ. ಕುಷಿ ನಗರದ ಕಾಲೇಜಿನಲ್ಲಿ ವನಮಹೋತ್ಸವಕ್ಕೆ ಆಗಮಿಸಿದ್ದ ಸಚಿವರ ಪಾದರಕ್ಷೆ ಗಲೀಜಾಗಿತ್ತು. ಈ ವೇಳೆ ಸಚಿವರ ಸಿಬ್ಬಂದಿ ಬಟ್ಟೆಯಿಂದ ಅವರ ಪಾದರಕ್ಷೆಯನ್ನು ಒರೆಸಿದ್ದು ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಯಿತು.

ಆದರೆ, ಬಳಿಕ ಮಾಧ್ಯಮ ಪ್ರತಿನಿಧಿ ಪ್ರತಿಕ್ರಿಯೆ ಬಯಸಿದಾಗ, ಅಂಥ ಘಟನೆ ನಡೆದಿಲ್ಲ. ನನ್ನ ಪಾದರಕ್ಷೆಯನ್ನು ಯಾರೂ ಸ್ವಚ್ಛಗೊಳಿಸಿಲ್ಲ ಎಂದಿದ್ದಾರೆ.

ಬಳಿಕ ಚಪ್ಪಲಿ ಮೇಲೆ ನೀರು ಬಿತ್ತು ನಾನೇ ಒರೆಸಿಕೊಂಡಿದ್ದೇನೆ ಎಂದು ವಿಷಯಾಂತರ ಮಾಡಲು ಪ್ರಯತ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...