alex Certify
ಕನ್ನಡ ದುನಿಯಾ       Mobile App
       

Kannada Duniya

2 ಸಾವಿರಕ್ಕೆ ಚಿಲ್ಲರೆ ನೀಡಿ ಜನರಿಗೆ ನೆರವಾಗಿದ್ದಾನೆ ಈ ವ್ಯಕ್ತಿ

notes_vmzak8u

ಕೈನಲ್ಲಿ 2 ಸಾವಿರ ರೂಪಾಯಿ ನೋಟಿದೆ. ಇದಕ್ಕೆ ಚಿಲ್ಲರೆ ಸಿಗ್ತಾ ಇಲ್ಲ ಎನ್ನೋದು ಎಲ್ಲರ ಗೋಳು. ಚಿಲ್ಲರೆ ಇದ್ದವರೂ ಚಿಲ್ಲರೆ ಇಲ್ಲ ಅಂತಾ ಸುಳ್ಳು ಹೇಳ್ತಿದ್ದಾರೆ. ಈ ನಡುವೆ ನೂರಾರು ಜನರಿಗೆ ಚಿಲ್ಲರೆ ನೀಡಿದ ಈ ವ್ಯಕ್ತಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾನೆ.

ಉತ್ತರ ಪ್ರದೇಶದ ಸೋಹನ್ ಗುಪ್ತಾ ಪಾನಿಪುರಿ ವ್ಯಾಪಾರ ನಡೆಸ್ತಿದ್ದಾನೆ. ಪ್ರತಿದಿನ ತನ್ನ ಬಳಿ ಬರುವ ಮೂವರಿಗೆ 2 ಸಾವಿರ ರೂಪಾಯಿ ಚಿಲ್ಲರೆ ನೀಡಿ ನೆರವಾಗ್ತಿದ್ದಾನೆ. ನೋಟು ನಿಷೇಧದ ನಂತ್ರ ಈವರೆಗೆ ಸುಮಾರು 100 ಜನರಿಗೆ 2 ಸಾವಿರ ರೂಪಾಯಿ ಚಿಲ್ಲರೆ ನೀಡಿದ್ದಾನೆ ಸೋಹನ್.

ವರ್ಲಿ ನಿವಾಸಿ ಸೋಹನ್ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಾನಿಪುರಿ ಮಾರಾಟ ಮಾಡ್ತಾನೆ. ದಿನಕ್ಕೆ 15-20 ಮಂದಿ 2 ಸಾವಿರ ರೂಪಾಯಿ ಹಿಡಿದು ಬರ್ತಾರಂತೆ. ಅವರೆಲ್ಲರಿಗೂ ಚಿಲ್ಲರೆ ನೀಡುವುದು ಕಷ್ಟ. ಆದ್ರೆ ಪ್ರತಿದಿನ 2-3 ಜನರಿಗೆ ಚಿಲ್ಲರೆ ನೀಡುತ್ತೇನೆ ಎನ್ನುತ್ತಾನೆ ಸೋಹನ್. ಯಾವುದೇ ಕಮಿಷನ್ ತೆಗೆದುಕೊಳ್ಳದೆ ಸೋಹನ್ ಚಿಲ್ಲರೆ ನೀಡುವುದರಿಂದ ಗ್ರಾಹಕರು ಖುಷಿಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...