alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ಎಸ್.ಪಿ. ಗೆ ಮುನ್ನಡೆ– ಸಮೀಕ್ಷೆಯಲ್ಲಿ ಬಹಿರಂಗ

UP SP2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮೇಲುಗೈ ಸಾಧಿಸಲಿದೆ ಅಂತಾ ಸಮೀಕ್ಷೆಯೊಂದು ಹೇಳಿದೆ. ಆಡಳಿತಾರೂಢ ಎಸ್ಪಿ, ಬಿಜೆಪಿ ಹಾಗೂ ಬಿಎಸ್ಪಿಗಿಂತ ಕೊಂಚ ಮುನ್ನಡೆ ಸಾಧಿಸಲಿದೆ ಅಂತಾ ಜನಮತ ಸಂಗ್ರಹದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ತಕ್ಷಣಕ್ಕೆ ಚುನಾವಣೆ ನಡೆಸಿದ್ರೆ ಬಿಜೆಪಿ ತನ್ನ ಅಂಗಪಕ್ಷಗಳಾದ ಅಪ್ನಾ ದಳ್ ಮತ್ತು ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿಯೊಟ್ಟಿಗೆ ಶೇ.27ರಷ್ಟು ಮತಗಳನ್ನು ತನ್ನದಾಗಿಸಿಕೊಳ್ಳಲಿದೆ. ಶೇ.26ರಷ್ಟು ಮತಗಳು ಬಿಎಸ್’ಪಿ ಪಾಲಾಗಲಿವೆ. ಆದ್ರೆ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸ್ತಾ ಇದ್ರೂ ಕಾಂಗ್ರೆಸ್ ಪ್ರದರ್ಶನ ಮಾತ್ರ ನಿರಾಶಾದಾಯಕವಾಗಿರಲಿದೆ. ಕೈ ಪಾಳಯಕ್ಕೆ ಕೇವಲ ಶೇ.5ರಷ್ಟು ಮತಗಳು ದಕ್ಕಲಿವೆ.

403 ಸದಸ್ಯರನ್ನೊಳಗೊಂಡ ವಿಧಾನಸಭೆಯಲ್ಲಿ ಸಮಾಜವಾಗಿ ಪಕ್ಷ 141-151 ಸ್ಥಾನಗಳನ್ನು ಪಡೆಯಲಿದೆ ಅಂತಾ ಸಮೀಕ್ಷೆ ಹೇಳಿದೆ. ಬಿಜೆಪಿಗೆ 124-134 ಸ್ಥಾನಗಳು, ಬಿಎಸ್’ಪಿಗೆ 103-113 ಸ್ಥಾನಗಳು ದೊರೆಯಲಿವೆ ಅಂತಾ ಅಂದಾಜಿಸಲಾಗಿದೆ. ಶೇಕಡಾವಾರು ಮತಗಳ ಲೆಕ್ಕಾಚಾರದಲ್ಲೂ ಕಮಲ ಪಕ್ಷಕ್ಕೆ ಹಿನ್ನಡೆ ಖಚಿತ ಅಂತಾ ಸಮೀಕ್ಷೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...