alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಕಿ ಚಾಲೆಂಜ್ ವಿರುದ್ಧ ಅಭಿಯಾನ ಶುರು ಮಾಡಿದ ಪೊಲೀಸ್

ವಿದೇಶದಲ್ಲಿ ಜನಪ್ರಿಯಗೊಂಡಿರುವ ಕಿಕಿ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ವೈರಲ್ ಆಗಿದೆ. ಚಲಿಸುತ್ತಿರುವ ಕಾರಿನಿಂದ ಕೆಳಗಿಳಿದು ಡಾನ್ಸ್ ಮಾಡುವ ಚಾಲೆಂಜ್ ಇದಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ಈ ಚಾಲೆಂಜ್ ಮಾಡ್ತಿದ್ದಾರೆ. ಕಿಕಿ ಚಾಲೆಂಜ್ ನಿಂದ ಅಪಘಾತಗಳಾಗಿರುವ ಸುದ್ದಿ ಕೇಳಿ ಬರ್ತಿದೆ.

ಕಿಕಿ ಚಾಲೆಂಜ್ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಮುಂಬೈ, ಉತ್ತರ ಪ್ರದೇಶ ಪೊಲೀಸರೊಂದೇ ಅಲ್ಲ ಅಮೆರಿಕಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಕೂಡ ಕಿಕಿ ಚಾಲೆಂಜ್ ಮಾಡದಂತೆ ಜನರಿಗೆ ಮನವಿ ಮಾಡಿದೆ. ಈ ಚಾಲೆಂಜ್ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ವಿನಂತಿ ಮಾಡ್ತಿದ್ದಾರೆ.

ಕಿಕಿ ಚಾಲೆಂಜ್ ನಿಮಗೊಂದೇ ಅಲ್ಲ ಬೇರೆಯವರಿಗೂ ಅಪಾಯಕಾರಿ. ಕಿಕಿ ಚಾಲೆಂಜ್ ನಿಮ್ಮ ಮಕ್ಕಳು ಇಷ್ಟಪಡ್ತಾರೋ ಇಲ್ಲವೋ ಗೊತ್ತಿಲ್ಲ. ನೀವು ನಿಮ್ಮ ಮಕ್ಕಳನ್ನು ಇಷ್ಟಪಡ್ತಿರಿ. ಹಾಗಾಗಿ ಕಿಕಿ ಚಾಲೆಂಜ್ ಬಿಟ್ಟು ನಿಮ್ಮ ಮಕ್ಕಳ ಜೀವನದ ಸವಾಲಿಗೆ ನೆರವಾಗಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...