alex Certify
ಕನ್ನಡ ದುನಿಯಾ       Mobile App
       

Kannada Duniya

ಹುಲಿ ಘರ್ಜನೆ ಕೇಳಿ ಕೋತಿಗಳಿಗೆ ಹೃದಯಾಘಾತ

ಉತ್ತರ ಪ್ರದೇಶದಲ್ಲಿ 12 ಕೋತಿಗಳು ಹೃದಯಾಘಾತದಿಂದ ಮೃತಪಟ್ಟಿವೆ. ಹುಲಿ ನೋಡಿ ಬೆದರಿದ ಕೋತಿಗಳಿಗೆ ಹೃದಯಾಘಾತವಾಗಿದೆ ಅಂತಾ ತಜ್ಞರು ತಿಳಿಸಿದ್ದಾರೆ. ಕಾಡಿನ ಬಳಿ ಹತ್ತಾರು ಕೋತಿಗಳು ಸತ್ತು ಬಿದ್ದಿರೋದನ್ನು ನೋಡಿ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಮಂಗಗಳಿಗೆ ವಿಷ ಕೊಟ್ಟು ಕೊಂದಿರಬಹುದೆಂಬ ಅನುಮಾನ ಮೂಡಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯ್ತು. ಆದ್ರೆ ಅವು ಹೃದಯಾಘಾತದಿಂದ ಸಾವನ್ನಪ್ಪಿರೋದು ಪೋಸ್ಟ್ ಮಾರ್ಟಂನಲ್ಲಿ ದೃಢಪಟ್ಟಿದೆ. ಆ ಭಾಗದಲ್ಲಿ ಹುಲಿಗಳು ಹೆಚ್ಚಾಗಿದ್ದು, ಹುಲಿಯ ಘರ್ಜನೆ ಕೇಳಿ ಕೋತಿಗಳಿಗೆ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದೆ ಅಂತಾ ಹೇಳಲಾಗ್ತಿದೆ.

ಆದ್ರೆ ಪ್ರಾಣಿ ಪ್ರಿಯರು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಕೋತಿಗಳು ಕ್ರೂರ ಪ್ರಾಣಿಗಳನ್ನು ನೋಡಿ ಭಯಪಡುವುದಿಲ್ಲ. ಯಾವುದೋ ಇನ್ಫೆಕ್ಷನ್ ನಿಂದ ಸಾವು ಸಂಭವಿಸಿದೆ ಅಂತಾ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...