alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕಾರಕ್ಕೆ ಬರುವವರೆಗೂ ಗಡ್ಡ ಬೋಳಿಸುವುದಿಲ್ಲವೆಂದ ಕಾಂಗ್ರೆಸ್ ಅಧ್ಯಕ್ಷ

uttam-kumar-reddy-5667ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರ ಗದ್ದುಗೆಗೇರುವವರೆಗೂ ತಾವು ಗಡ್ಡ ಬೋಳಿಸುವುದಿಲ್ಲವೆಂಬ ಶಪಥ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ಮಾಧ್ಯಮಗಳ ಮುಂದೆ ಬಾಯ್ಬಿಟ್ಟಿದ್ದಾರೆ.

ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕರಾಗಿರುವ ನಲಮಾಡ ಉತ್ತಮ್ ಕುಮಾರ್ ರೆಡ್ಡಿ ಸೇನೆಯ ಹಿನ್ನಲೆ ಹೊಂದಿದವರು. ಭಾರತೀಯ ವಾಯುಪಡೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಉತ್ತಮ್ ಕುಮಾರ್ ಈಗ ರಾಜಕೀಯ ಅಖಾಡಕ್ಕಿಳಿದಿದ್ದಾರೆ.

ಸದಾ ಶೇವ್ ಮಾಡಿಕೊಂಡು ಟ್ರಿಮ್ ಆಗಿರುತ್ತಿದ್ದ ಉತ್ತಮ್ ಕುಮಾರ್ ರೆಡ್ಡಿಯವರು ಗಡ್ಡ ಬಿಟ್ಟಿರುವುದಕ್ಕೆ ಮಾಧ್ಯಮದವರು ಕಾರಣ ಕೇಳಿದ ವೇಳೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಶತಃಸಿದ್ದ. ಅಲ್ಲಿಯವರೆಗೂ ತಾವು ಗಡ್ಡ ಬೋಳಿಸುವುದಿಲ್ಲವೆಂಬ ಹೇಳಿಕೆ ನೀಡಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 21 ಸ್ಥಾನಗಳಲ್ಲಷ್ಟೇ ಜಯಶಾಲಿಯಾಗಿದೆ. ಉತ್ತಮ್ ಕುಮಾರ್ ರೆಡ್ಡಿ ನಲ್ಗೊಂಡಾ ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2019 ರಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಧಿಕಾರಕ್ಕೇರಲು ಸಾಧ್ಯವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...