alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಆಹ್ವಾನ ನಿರಾಕರಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವರ್ಷ ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ಟ್ರಂಪ್, ಭಾರತ ಸರ್ಕಾರ ನೀಡಿರುವ ಆಹ್ವಾನವನ್ನು ನಿರಾಕರಿಸಿದ್ದಾರೆ. ಯುಎಸ್ಎ ಅಧಿಕಾರಿಗಳು, ಅಜಿತ್ ದೋವಲ್ ಗೆ ನೀಡಿರುವ ಪತ್ರದಲ್ಲಿ ಈ ವಿಷ್ಯ ತಿಳಿಸಿದ್ದಾರೆ. ಪತ್ರದಲ್ಲಿ ಟ್ರಂಪ್ ಪರ ಅಧಿಕಾರಿಗಳು ಕ್ಷಮೆ ಕೋರಿದ್ದಾರೆ.

ಅಮೆರಿಕ ಅಧಿಕಾರಿಗಳ ಪ್ರಕಾರ, ಮುಂದಿನ ತಿಂಗಳು ಜನವರಿ 26ರ ಆಸುಪಾಸು ಸ್ಟೇಟ್ ಆಫ್ ದಿ ಯುನಿಯನ್ ಅಡ್ರೆಸ್ (ರಾಷ್ಟ್ರದ ಹೆಸರಿನಲ್ಲಿ ಭಾಷಣ) ಕಾರ್ಯಕ್ರಮದಲ್ಲಿ ಬ್ಯುಸಿಯಿರಲಿದ್ದಾರೆ. ಹಾಗಾಗಿ ಭಾರತ ಸರ್ಕಾರದ ಆಹ್ವಾನವನ್ನು ಸ್ವೀಕರಿಸಿಲ್ಲ.

ಅಧ್ಯಕ್ಷ ಡೊನಾಲ್ಡ್ ನಡೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ನಡೆಗಿಂತ ಭಿನ್ನವಾಗಿದೆ. ಬರಾಕ್ ಒಮಾಬಾ ಕೆಲಸದ ಮಧ್ಯೆಯೇ 2015 ರಲ್ಲಿ ಭಾರತದ ಆಹ್ವಾನ ಸ್ವೀಕರಿಸಿ ಭಾರತಕ್ಕೆ ಬಂದಿದ್ದರು. ತೈಲ ಖರೀದಿ ಹಾಗೂ ರಷ್ಯಾದ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಅಮೆರಿಕಾ ಮಧ್ಯೆಯಿದ್ದ ಸಂಬಂಧ ಮೊದಲಿನಷ್ಟು ಬಲವಾಗಿಲ್ಲ. ಇದು ಡೊನಾಲ್ಡ್ ಟ್ರಂಪ್ ನಡೆಗೆ ಮುಖ್ಯ ಕಾರಣ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...