alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗನ ಪ್ರಾಣಕ್ಕೆ ಎರವಾಯ್ತು ಹುಚ್ಚು ಸಾಹಸ

ನಿಮಗೆ ಜೀವನದಲ್ಲಿ ಒಮ್ಮೆಯಾದರೂ ಅಂಡಮಾನ್ ಪ್ರವಾಸ ಮಾಡಬೇಕೆಂಬ ಹಂಬಲ ಇದೆಯೇ? ಹಾಗಿದ್ದರೆ ಇಲ್ಲಿ ಕೇಳಿ, ನೀವು ಹೋದಾಗ ಅಲ್ಲಿನ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಇಲ್ಲೊಬ್ಬ ಅಮೆರಿಕದವ ಸಾಹಸ ಪ್ರವಾಸದ ಹೆಸರಿನಲ್ಲಿ ಒಂದು ಬುಡಕಟ್ಟು ಸಮುದಾಯ ನೆಲೆಸಿರುವ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ತನ್ನ ಜೀವವನ್ನೇ ತೆತ್ತಿದ್ದಾನೆ. ಅಂಡಮಾನ್ ನ ದಕ್ಷಿಣ ಸೆಂಟಿನಲ್ ದ್ವೀಪದಲ್ಲಿ ಈ ಘಟನೆ ನಡೆದಿದೆ. ಜಾನ್ ಅಲೆನ್ ಚಾವ್ ಎಂಬಾತನೇ ಮೃತಪಟ್ಟ ಅಮೆರಿಕದ ಪ್ರಜೆ.

ಈ ಪ್ರದೇಶವನ್ನು ಪ್ರವೇಶಿಸಲು ಜಾನ್ ಅಲ್ಲಿನ ಏಳು ಮೀನುಗಾರರ ಸಹಾಯವನ್ನು ಕೇಳಿದ್ದಾನೆ. ಅಲ್ಲಿನ ಬುಡಕಟ್ಟು ನಿಯಮದ ಪ್ರಕಾರ ಅನುಮತಿ ಇಲ್ಲದೆ ಹೋಗಲು ಸಾಧ್ಯವಿಲ್ಲದಿದ್ದರೂ ಅಕ್ರಮವಾಗಿ ಕಳುಹಿಸಲು ಈ ಮೀನುಗಾರರು ಒಪ್ಪಿಕೊಂಡಿದ್ದಾರೆ.

ಇದರ ಪ್ರಕಾರ ಜಾನ್ ನನ್ನು ಕಳುಹಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಆದರೆ ಹೊರ ಜಗತ್ತಿನ ಸಂಪರ್ಕವನ್ನೇ ಹೊಂದಿರದ ಈ ಬುಡಕಟ್ಟು ನಿವಾಸಿಗಳು ಅಕ್ರಮವಾಗಿ ಪ್ರವೇಶಿಸಿದ ಜಾನ್ ನನ್ನು ಕಂಡು ಆತ್ಮರಕ್ಷಣೆಗಾಗಿ ದಾಳಿ ನಡೆಸಿ ಕೊಂದು ಹಾಕಿದ್ದಾರೆ.

ಈ ಪ್ರಕರಣ ಸಂಬಂಧ ಏಳು ಮೀನುಗಾರರನ್ನು ಬಂಧಿಸಲಾಗಿದೆ. ಬುಡಕಟ್ಟು ರಕ್ಷಣಾ ಕಾಯ್ದೆ ಹಾಗೂ ಇನ್ನಿತರ ಹಲವು ಐಪಿಸಿ ಸೆಕ್ಷನ್ ಗಳಡಿ ಪ್ರಕರಣವನ್ನು ದಾಖಲಿಸಲಾಗಿದೆ. ಘಟನೆ ನಡೆದು ಐದು ದಿನ ಕಳೆದಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಇಲ್ಲಿನ ಬುಡಕಟ್ಟು ನಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಜಾನ್ ಬಂದಿದ್ದ ಎಂದು ಹೇಳಲಾಗುತ್ತಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...