alex Certify
ಕನ್ನಡ ದುನಿಯಾ       Mobile App
       

Kannada Duniya

ಸೀರೆ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ ಅಮೆರಿಕಾ ರಾಯಭಾರಿ

ನವದೆಹಲಿ: ಭಾರತದಲ್ಲಿನ ಅಮೆರಿಕ ರಾಯಭಾರಿ ಮೇರಿ ಕೆ ಕಾರ್ಲ್ ಸನ್ ಸೀರೆ ಹುಡುಕಾಟದ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.

ಸ್ವಾತಂತ್ರ್ಯೋತ್ಸವಕ್ಕೆ ಇನ್ನೆರಡು ದಿನ ಬಾಕಿ ಇರುವಾಗ, ಆಗಸ್ಟ್ 15ರ ಕಾರ್ಯಕ್ರಮದಲ್ಲಿ ತಾವು ಯಾವ ಸೀರೆ ಧರಿಸಿದರೆ ಸೂಕ್ತ ಎಂದು ಟ್ವೀಟರ್ ನಲ್ಲಿ ಹತ್ತಾರು ಸೀರೆ ಪ್ರದರ್ಶಿಸಿರುವ ಫೋಟೊ ಪ್ರಕಟಿಸಿದ್ದಾರೆ.

ತಮ್ಮ ಸೀರೆ ಪ್ರೇಮ, ಅವಿನಾಭಾವ ಸಂಬಂಧವನ್ನು ಪ್ರಸ್ತಾಪಿಸಿರುವ ಅವರು, ನಾನು ಭಾರತೀಯ ಸೀರೆಗಳನ್ನು ಪ್ರೀತಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಸ್ವಾತಂತ್ರ್ಯ ದಿನದಂದು. ಸೀರೆ ದೇಶದ ವಿಶಾಲ ಸಂಸ್ಕೃತಿ, ವೈವಿದ್ಯತೆಯನ್ನು ಪ್ರತಿನಿಧಿಸುತ್ತದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ಟ್ವೀಟರ್ ಗೆ ಥೈಲ್ಯಾಂಡ್ ರಾಯಭಾರಿ ಚುಟಿನ್ಟಾರ್ನ್ ಸ್ಯಾಮ್ ಪ್ರತಿಕ್ರಿಯೆ ನೀಡಿ, ಈ ದೇಶದ ಸಾಂಸ್ಕೃತಿಕ ಪರಂಪರೆ ನಮ್ಮನ್ನು ಪ್ರೀತಿಯಲ್ಲಿ ಬಂಧಿಸಿಬಿಡುತ್ತದೆ ಎಂದು ಹೇಳಿದ್ದಾರಲ್ಲದೇ, ಸೀರೆ ಸಂಗ್ರಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಕಾರ್ಲ್ ಸನ್ ಅವರು ಕೆಂಪು- ಹಸಿರು ಮಿಳಿತದ ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...