alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟ ನಿವಾರಣೆಗಾಗಿ ಹೌರಾ ಬ್ರಿಡ್ಜ್ ಏರಿದ ಭೂಪ

ಭಾರತದಲ್ಲಿನ ಬಡತನ ಹಾಗೂ ಜನತೆ ಅನುಭವಿಸುತ್ತಿರುವ ಸಂಕಷ್ಟಗಳ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸಲು ವ್ಯಕ್ತಿಯೊಬ್ಬ ಹೌರಾ ಸೇತುವೆ ಏರಿದ್ದ ವಿಲಕ್ಷಣ ಘಟನೆ ಸೋಮವಾರದಂದು ನಡೆದಿದೆ.

ವೃತ್ತಿಯಲ್ಲಿ ಶಿಕ್ಷಕನಾಗಿರುವ 26 ವರ್ಷದ ಅರುಣ್ ಕುಮಾರ್ ಎಂಬಾತ ಬಿಹಾರದ ಬಕ್ಸರ್ ನಿಂದ ಆಗಮಿಸಿದ್ದು, ಸೇತುವೆ ಮೇಲೇರಿ ಕೈ ಮುಗಿದು ಪ್ರಾರ್ಥಿಸಲು ಆರಂಭಿಸಿದ್ದಾನೆ.

ಇದನ್ನು ಗಮನಿಸಿದ ಜನತೆ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಅವರುಗಳು ಅರುಣ್ ಕುಮಾರನ ಮನವೊಲಿಸಲು ಮುಂದಾಗಿದ್ದಾರೆ.

ಸತತ ಪ್ರಯತ್ನದ ಬಳಿಕ ನಿನಗೆ ಪ್ರಾರ್ಥನೆ ಮಾಡಲು ಬೇರೊಂದು ಕಡೆ ವ್ಯವಸ್ಥೆ ಮಾಡುವುದಾಗಿ ಹೇಳಿ ಅರುಣ್ ಕುಮಾರನ ಮನವೊಲಿಸಿ ಕೆಳಗಿಳಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅರುಣ್ ಕುಮಾರನ ಪೋಷಕರಿಗೆ ಮಾಹಿತಿ ಮುಟ್ಟಿಸಿದ ವೇಳೆ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವಿಚಾರ ಗೊತ್ತಾಗಿದೆ. ಈ ಕಾರಣಕ್ಕಾಗಿ ತನ್ನ ಶಿಕ್ಷಕ ವೃತ್ತಿಯನ್ನೂ ತೊರೆದಿದ್ದನೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...