alex Certify
ಕನ್ನಡ ದುನಿಯಾ       Mobile App
       

Kannada Duniya

ನರ್ಸರಿಯಿಂದಲೇ ಇಂಗ್ಲೀಷ್ ಅನಿವಾರ್ಯ: ಶಾಲೆಗಳಲ್ಲಿ ಯೋಗ ಕಡ್ಡಾಯ

international-yoga-fest

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ, ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಿದೆ. ಯೋಗ, ದೈಹಿಕ ಶಿಕ್ಷಣದ ಒಂದು ಭಾಗವಾಗಲಿದೆ. ದೈಹಿಕ ಶಿಕ್ಷಣ ಶಾಲೆಗಳಲ್ಲಿ ಕಡ್ಡಾಯವಾಗಿದ್ದು, ಹಾಗಾಗಿ ಯೋಗ ಕೂಡ ಪಠ್ಯಕ್ರಮದ ಒಂದು ಭಾಗವಾಗಲಿದೆ.

ಇದ್ರ ಜೊತೆಗೆ ಸ್ವ-ರಕ್ಷಣಾ ತರಬೇತಿಯನ್ನು ವಿದ್ಯಾರ್ಥಿನಿಯರಿಗೆ ನೀಡುವಂತೆಯೂ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ. ಸೋಮವಾರ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಯೋಗಿ ಮಾತುಕತೆ ನಡೆಸಿದ್ದರು. ಇದಾದ ನಂತ್ರ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ರಾಣಿ ಲಕ್ಷ್ಮಿಬಾಯ್ ಆತ್ಮರಕ್ಷಕ ಕಾರ್ಯಕ್ರಮದ ಹೆಸರಿನಲ್ಲಿ ಬಾಲಕಿಯರಿಗೆ ಸ್ವ-ರಕ್ಷಣಾ ತರಬೇತಿ ನೀಡಲಾಗುವುದು. ಯೋಗ ಶಿಕ್ಷಾ ಕಾರ್ಯಕ್ರಮದ ಹೆಸರಿನಲ್ಲಿ ಯೋಗ ತರಬೇತಿ ನೀಡಲಾಗುವುದು.

ಇದ್ರ ಜೊತೆಗೆ ಇನ್ನೊಂದು ಮಹತ್ವದ ನಿರ್ಧಾರವನ್ನು ಯೋಗಿ ಸರ್ಕಾರ ತೆಗೆದುಕೊಂಡಿದೆ. ನರ್ಸರಿಯಿಂದಲೇ ಇಂಗ್ಲೀಷ್ ಭಾಷೆಯನ್ನು ಅನಿವಾರ್ಯ ಮಾಡಿದೆ. ಈವರೆಗೆ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಇಂಗ್ಲೀಷ್ ಪಾಠ ಹೇಳಿಕೊಡಲಾಗುತ್ತಿತ್ತು. ಆದ್ರೀಗ ನರ್ಸರಿಯಿಂದಲೇ ಇಂಗ್ಲೀಷ್ ಕಡ್ಡಾಯವಾಗಿದೆ. ಹಾಗೆ ಖಾಸಗಿ ಶಾಲೆಗಳು ಪಾಲಕರಿಂದ ವಸೂಲಿ ಮಾಡುತ್ತಿರುವ ಡೊನೇಷನ್ ವಿರುದ್ಧವೂ ಯೋಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...