alex Certify
ಕನ್ನಡ ದುನಿಯಾ       Mobile App
       

Kannada Duniya

ಕೈ ಗಾಡಿಯಲ್ಲಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ಪತಿ…!

ಸರ್ಕಾರಗಳು ಎಷ್ಟೇ ಸವಲತ್ತುಗಳನ್ನು ನೀಡಿದ್ರೂ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಹೌದು, ಉತ್ತರ ಪ್ರದೇಶದ ಕನೂಜ್ ನಲ್ಲಿ ಅಂಬ್ಯುಲೆನ್ಸ್ ಸಿಗದೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೈಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಘಟನೆ ನಡೆದಿದೆ.

ಆಸ್ಪತ್ರೆಗೆ ಬಂದು ಐದು ತಾಸು ಕಾದ್ರೂ, ವೈದರು ಸಿಗದೆ ಆ ಮಹಿಳೆ ನೋವಿನಿಂದ ನರಕಯಾತನೆ ಅನುಭವಿಸಿದ್ದಾಳೆ. ಸೋನಿ ಎಂಬ ಮಹಿಳೆಗೆ ಮಾರ್ಚ್ 30 ರಂದು ಸಿಸೇರಿಯನ್ ಮೂಲಕ ಡೆಲೆವರಿ ಮಾಡಲಾಗಿತ್ತು. ಆದ್ರೆ ಡೆಲೆವರಿ ಆಗಿ ಕೆಲ ದಿನಗಳ ಬಳಿಕ ಆಕೆಗೆ ಹುಟ್ಟಿದ ಗಂಡು ಮಗು ಸಾವನ್ನಪ್ಪಿತ್ತು.

ಇನ್ನು ತಾಯಿ ಸೋನಿಯ ಮೂತ್ರ ಪಿಂಡ ಛಿದ್ರಗೊಂಡಿದ್ದು, ಆಕೆಯ ಗರ್ಭಾಶಯವನ್ನು ತೆಗೆದು ಮೂತ್ರ ಪಿಂಡವನ್ನು ಹೊಲೆಯಬೇಕು ಎಂದು ಪತಿ ಅನೂಜ್ ಕುಮಾರ್ ಗೆ ವೈದ್ಯರು ತಿಳಿಸಿದ್ರು. ಕೆಲ ದಿನಗಳವರೆಗೂ ನೋವು ತಿಂದ ಸೋನಿಯಾಳನ್ನ ಸ್ಥಳೀಯ ಕಮ್ಯೂನಿಟಿ ಹೆಲ್ತ್ ಸೆಂಟರ್ ಗೆ ಪತಿ ಅನೂಜ್ ಕರೆದೊಯ್ದ.

ಆದ್ರೆ ಅಲ್ಲಿಯ ವೈದ್ಯರು ಉತ್ತಮ ಚಿಕಿತ್ಸೆಗಾಗಿ ಕನೂಜ್ ಅಥವಾ ಕಾನ್ಪುರ್ ಗೆ ಕರೆದೊಯ್ಯುವಂತೆ ಸಲಹೆ ನೀಡಿದ್ರು. ಅಂತೆಯೇ ಅನೂಜ್ 108 ಗೆ ಕರೆ ಮಾಡಿದ. ಆದ್ರೆ ಅಂಬ್ಯುಲೆನ್ಸ್ ಬರಲೇ ಇಲ್ಲ. ಹೀಗಾಗಿ ಕೈಗಾಡಿಯಲ್ಲೇ ತನ್ನ ಸಹೋದರಿಯೊಂದಿಗೆ ಸುಮಾರು 5 ಕಿ.ಮೀ. ದೂರದ ಆಸ್ಪತ್ರೆಗೆ ಪತ್ನಿಯನ್ನ ಕರೆದೊಯ್ದ. ಆದ್ರೆ ಆಸ್ಪತ್ರೆಗೆ ಹೋದ್ರೆ ವೈದ್ಯರಿಲ್ಲ. ತಾಸುಗಟ್ಟಲೆ ಕಾದ್ರೂ ವೈದ್ಯರು ಸಿಗದಿದ್ದಕ್ಕೆ ಅನೂಜ್ ಆಕ್ರೋಶ ವ್ಯಕ್ತಪಡಿಸಿದ್ದಾನೆ. ನಂತರ ಬಂದ ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಂಬ್ಯುಲೆನ್ಸ್ ಬಾರದ ಬಗ್ಗೆ, ವೈದ್ಯರು ಸಮಯಕ್ಕೆ ಸರಿಯಾಗಿ ಬಂದು ಚಿಕಿತ್ಸೆ ನೀಡದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...