alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಿ ರಾಜ್ಯದಲ್ಲೂ ಸಿಗಲಿಲ್ಲ ಅಂಬುಲೆನ್ಸ್

baby-feet

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತ್ರ ಒಂದಾದ ಮೇಲೆ ಒಂದು ಅಭಿವೃದ್ಧಿ ಕಾರ್ಯಗಳನ್ನು ಮಾಡ್ತಿರುವ ಸಿಎಂ ಯೋಗಿ ರಾಜ್ಯದಲ್ಲಿ ಆ್ಯಂಬುಲೆನ್ಸ್ ಕೊರತೆ ಇದೆ. ಉತ್ತರ ಪ್ರದೇಶದ ಬಹರೈಚ್ ನಲ್ಲಿ ನಡೆದ ಘಟನೆ ಇದಕ್ಕೆ ಉತ್ತಮ ನಿದರ್ಶನ.

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಆ್ಯಂಬುಲೆನ್ಸ್ ಸಿಗದ ಕಾರಣ ಮಹಿಳೆಯನ್ನು ಬೈಕ್ ನಲ್ಲಿಯೇ ಕರೆದೊಯ್ದಿದ್ದಾರೆ ಕುಟುಂಬಸ್ಥರು. ಆದ್ರೆ ಮಧ್ಯ ದಾರಿಯಲ್ಲಿ ನೋವು ಜಾಸ್ತಿಯಾಗಿ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ ಮಹಿಳೆ. ಕುಟುಂಬಸ್ಥರು 108 ಹಾಗೂ 102ಕ್ಕೆ ಕರೆ ಮಾಡಿದ್ದಾರೆ. ಆದ್ರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ಬೈಕ್ ಏರಿದ್ದಾರೆ ಕುಟುಂಬಸ್ಥರು.

ಸ್ವಲ್ಪ ದೂರ ಹೋಗ್ತಿದ್ದಂತೆ ಮಹಿಳೆ ನೋವು ಜಾಸ್ತಿಯಾಗಿದೆ. ರಸ್ತೆ ಬಳಿಯೇ ಒದ್ದಾಡಿದ್ದಾಳೆ ಮಹಿಳೆ. ಅಕ್ಕ-ಪಕ್ಕದಲ್ಲಿದ್ದ ಮಹಿಳೆಯರು ಸಹಾಯಕ್ಕೆ ಬಂದಿದ್ದಾರೆ. ನೋವಿನಲ್ಲಿ ಒದ್ದಾಡಿ ಮಗುವಿಗೆ ಜನ್ಮ ನೀಡಿದ ಮಹಿಳೆ ಪ್ರಜ್ಞೆ ತಪ್ಪಿದ್ದಾಳೆ. ಸದ್ಯ ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...