alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಿಲ್ಲದವರಿಗೆ ಆಶ್ರಯ ನೀಡಲು ತೆಗೆದುಕೊಳ್ಳಲಾಗಿದೆ ಈ ತೀರ್ಮಾನ

ಮನೆಯಿಲ್ಲದ ನಿರಾಶ್ರಿತರಿಗೆ ಸೂರು ಒದಗಿಸಲು ಉತ್ತರ ಪ್ರದೇಶದ ಆಗ್ರಾ ಜಿಲ್ಲಾಡಳಿತ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ. ರೈಲ್ವೇಯ ಹಳೆಯ ಹಾಗೂ ನಿರುಪಯುಕ್ತ ಕೋಚ್ ಗಳನ್ನು ಇದಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ರೈಲ್ವೇ ಇಲಾಖೆಗೆ ಪತ್ರ ಬರೆಯಲಾಗಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ಈ ಕುರಿತು ನಿರ್ದೇಶನ ನೀಡಿದ್ದು, ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ರೈಲ್ವೇ ಕೋಚ್ ಗಳಲ್ಲಿ ಆಶ್ರಯ ನೀಡಲು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಳೆಯ ಹಾಗೂ ನಿರುಪಯುಕ್ತ ರೈಲ್ವೇ ಕೋಚ್ ಗಳ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಪತ್ರ ಬಂದಿರುವುದನ್ನು ಖಚಿತಪಡಿಸಿರುವ ರೈಲ್ವೇ ವಿಭಾಗೀಯ ಮ್ಯಾನೇಜರ್ ಸಂಚಿತ್ ತ್ಯಾಗಿ, ನಿರುಪಯುಕ್ತ ರೈಲ್ವೇ ಕೋಚ್ ಗಳ ಕುರಿತು ಮಾಹಿತಿ ನೀಡುವಂತೆ ಎಲ್ಲ ವಿಭಾಗಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಅಂತಿಮ ನಿರ್ಧಾರ ಕೈಗೊಳ್ಳುವ ಸಲುವಾಗಿ ರೈಲ್ವೇಯ ಮುಖ್ಯ ಕಛೇರಿಗೆ ಪತ್ರ ಕಳುಹಿಸಲಾಗಿದೆ ಎಂದಿದ್ದಾರೆ.

ಆಗ್ರಾದಲ್ಲಿ ದಿನಗೂಲಿ ಕಾರ್ಮಿಕರಿಗೆ ಕಾರ್ಯ ನಿರ್ವಹಿಸುವ ಸುಮಾರು 4 ಸಾವಿರ ಮಂದಿಗೆ ಸೂರಿಲ್ಲದ ಕಾರಣ ಫುಟ್ಪಾತ್ ನಲ್ಲೇ ಆಶ್ರಯ ಪಡೆಯುವಂತಾಗಿತ್ತು. ಮಳೆಗಾಲ ಹಾಗೂ ಚಳಿಗಾಲದಲ್ಲಿ ಇವರುಗಳ ಪರಿಸ್ಥಿತಿ ಶೋಚನೀಯವಾಗಿತ್ತು. ಈ ಹಿನ್ನಲೆಯಲ್ಲಿ ಈಗ ನಿರುಪಯುಕ್ತ ರೈಲ್ವೇ ಕೋಚ್ ಗಳನ್ನು ಅವರಿಗೆ ನೆಲೆ ನೀಡಲು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...