alex Certify
ಕನ್ನಡ ದುನಿಯಾ       Mobile App
       

Kannada Duniya

ಬೀಫ್ ಗಾಗಿ ಮುರಿದು ಬಿತ್ತು ಮದುವೆ

1

ಊಟದ ಮೆನುವಿನಲ್ಲಿ ಬೀಫ್ ಇಲ್ಲ ಅನ್ನೋ ಕಾರಣಕ್ಕೆ ಉತ್ತರಪ್ರದೇಶದ ರಾಂಪುರದಲ್ಲಿ ಮದುವೆಯೇ ಮುರಿದು ಬಿದ್ದಿದೆ. ದರಿಯಾಗಢ ಗ್ರಾಮದಲ್ಲಿ ನಡೆದ ಘಟನೆ ಇದು. ಊಟದ ಮೆನುವಿನಲ್ಲಿ ಹೆಣ್ಣಿನ ಕಡೆಯವರು ಬೀಫ್ ರೆಸಿಪಿಗಳನ್ನು ಮಾಡಿಸಿರಲಿಲ್ಲ.

ಆದ್ರೆ ಗಂಡಿನ ಕಡೆಯವರು ಬೀಫ್ ಬೇಕೇ ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಬೀಫ್ ಖಾದ್ಯವನ್ನು ಬಡಿಸಿ, ಇಲ್ಲವಾದ್ರೆ ಮದುವೆಯೇ ಕ್ಯಾನ್ಸಲ್ ಅಂತಾ ಬೆದರಿಸಿದ್ದಾರೆ. ಕೇವಲ ಬೀಫ್ ಮಾತ್ರವಲ್ಲ ವರದಕ್ಷಿಣೆಗಾಗಿಯೂ ವರನ ಸಂಬಂಧಿಕರು ಹಠ ಹಿಡಿದಿದ್ರು.

ವರನಿಗೆ ಒಂದು ಕಾರನ್ನು ಉಡುಗೊರೆಯಾಗಿ ಕೊಡಬೇಕೆಂದು ಡಿಮ್ಯಾಂಡ್ ಮಾಡಿದ್ರು. ಆದ್ರೆ ಇದಕ್ಕೆ ವಧುವಿನ ಹೆತ್ತವರು ಒಪ್ಪಿಲ್ಲ. ವರದಕ್ಷಿಣೆ ಕೊಡೋದು ಶಿಕ್ಷಾರ್ಹ ಅಪರಾಧ. ಸರ್ಕಾರ ಗೋಮಾಂಸ ಭಕ್ಷಣೆಯನ್ನು ನಿರ್ಬಂಧಿಸಿರೋದ್ರಿಂದ ಬೀಫ್ ಖಾದ್ಯ ಬಡಿಸಲು ಸಾಧ್ಯವೇ ಇಲ್ಲ ಅಂತಾ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಪರಿಣಾಮ ಮದುವೆ ಮುರಿದು ಬಿದ್ದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...