alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಬ್ಬಾವಿನ ಹಿಡಿತಕ್ಕೆ ಸಿಲುಕಿ ವಿಲವಿಲ ಒದ್ದಾಡಿದ ಮೇಕೆ

youtube-grab-14ಹೆಬ್ಬಾವಿನ ಹಿಡಿತಕ್ಕೆ ಸಿಲುಕಿ ಪ್ರಾಣ ರಕ್ಷಣೆಗಾಗಿ ಒದ್ದಾಡುತಿದ್ದ ಮೇಕೆಯನ್ನು ರಕ್ಷಿಸುವಲ್ಲಿ ಉತ್ತರ ಪ್ರದೇಶದ ಭಾಯಾರಿಚ್ ಜಿಲ್ಲೆಯ ಕತಾರಿನಘಾಟ್ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕತಾರಿನ ಘಾಟ್ ವನ್ಯಧಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಮೇಕೆಯನ್ನು ಹಿಡಿದು ನುಂಗಲು ಹವಣಿಸುತ್ತಿತ್ತು. ಇದನ್ನು ಕಂಡ ಗ್ರಾಮಸ್ಥರು ಅದರ ಹಿಡಿತದಿಂದ ಮೇಕೆಯನ್ನು ಬಿಡಿಸಲು ಹರಸಾಹಸಪಟ್ಟರೂ ಅದು ಸಾಧ್ಯವಾಗಲಿಲ್ಲ.

ಆಗ, ಅಲ್ಲಿಯೇ ಕ್ರಿಕೆಟ್ ಆಡುತ್ತಿದ್ದ ಹುಡುಗರ ತಂಡವೊಂದು ತಮ್ಮ ಕೈಯಲ್ಲಿದ್ದ ಬ್ಯಾಟ್ ಹಾಗೂ ವಿಕೆಟ್ ನಿಂದ ಹೆಬ್ಬಾವಿಗೆ ಹೊಡೆದು ಕಡೆಗೂ ಮೇಕೆಯನ್ನು ಹೆಬ್ಬಾವಿನ ಹಿಡಿತದಿಂದ ಪಾರು ಮಾಡಿದ್ದಾರೆ. ಅಂತೂ ಸಾವಿನಿಂದ ತಪ್ಪಿಸಿಕೊಂಡ ಮೇಕೆ ನಿಟ್ಟುಸಿರು ಬಿಟ್ಟಿದೆ. ಇತ್ತ ಹುಡುಗರ ಹೊಡೆತ ತಾಳಲಾರದ ಹೆಬ್ಬಾವು ಪೊದೆಯೊಳಗೆ ನುಗ್ಗಿ ಬಚಾವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...