alex Certify
ಕನ್ನಡ ದುನಿಯಾ       Mobile App
       

Kannada Duniya

ಮಸಣ ಸೇರಿದ 21 ಮಂದಿ ಮದ್ಯ ಪ್ರಿಯರು

spurious-liqu

ಲಖ್ನೋ: ಮದ್ಯವ್ಯಸನಿಗಳನ್ನೇ ಗುರಿಯಾಗಿಸಿಕೊಂಡು ಕಳ್ಳಭಟ್ಟಿ ಮಾರಾಟ ಮಾಡುವ ಜಾಲ ಉತ್ತರಪ್ರದೇಶದಲ್ಲಿ ವ್ಯಾಪಕವಾಗಿದ್ದು, ಹೀಗೆ ಕಳ್ಳಬಟ್ಟಿ ಸೇವಿಸಿ ಬರೋಬ್ಬರಿ 21 ಮಂದಿ ಮೃತಪಟ್ಟ ಘಟನೆ ಅಲಿಗಂಜ್ ಪ್ರದೇಶದಲ್ಲಿ ನಡೆದಿದೆ.

ಈ ಪ್ರದೇಶದಲ್ಲಿ ಕಳ್ಳಬಟ್ಟಿ ವ್ಯಾಪಾರ ಭಾರೀ ಜೋರಾಗಿದ್ದು, ಅಕ್ರಮವಾಗಿ ಹಳ್ಳಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಸೇವಿಸಿ ನಿನ್ನೆಯಷ್ಟೇ 17 ಮಂದಿ ಸಾವುಕಂಡಿದ್ದಾರೆ. ಭಾನುವಾರಕ್ಕೆ ಮೃತರ ಸಂಖ್ಯೆ 21 ಕ್ಕೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶ್ರೀಪಾಲ್ ಎಂಬುವವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಕಳ್ಳಬಟ್ಟಿ ಸೇವಿಸಿ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಅಲಿಗಂಜ್ ಸಮೀಪದ ಲುವಾರಿ ದರ್ವಾಜ್ ಹಾಗೂ ಲಾವ್ ಖೇರ್ ಗ್ರಾಮಗಳಲ್ಲಿ ಕಳ್ಳಬಟ್ಟಿ ಸೇವನೆಯಿಂದ ಹೆಚ್ಚಿನ ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದು, ವಿವಿಧ ಕಡೆಗಳಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ಕಳ್ಳಬಟ್ಟಿಯನ್ನು ನಾಶಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...