alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ಬರೆಯುವಾಗಲೇ ನಡೆಯಿತು ಘಟನೆ

student up

ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬ ಮಾತಿಗೆ ಪೂರಕ ಎನ್ನುವಂತಹ ಘಟನೆಗಳು ಆಗಾಗ ನಡೆಯುವುದನ್ನು ನೋಡಿರುತ್ತೀರಿ. ಅಲ್ಲಿನ ಕೆಲವರಂತೂ ಕಾನೂನು, ಪೊಲೀಸರಿಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ.

ಇದಕ್ಕೆ ಉದಾಹರಣೆಯಾಗುವಂತಹ ಘಟನೆಯೊಂದು ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ನಡೆದಿದೆ. ಪರೀಕ್ಷೆ ನಡೆಯುವ ಸಂದರ್ಭದಲ್ಲಿಯೇ, ತರಗತಿಗೆ ನುಗ್ಗಿದ್ದ ದುಷ್ಕರ್ಮಿಗಳ ಗುಂಪೊಂದು, ವಿದ್ಯಾರ್ಥಿಯೊಬ್ಬನನ್ನು ಮನಬಂದಂತೆ ಥಳಿಸಿದೆ. ಶಾಮ್ಲಿಯ ಆರ್.ಸಿ. ಹೈಯರ್ ಎಜುಕೇಷನ್ ಕಾಲೇಜ್ ನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯುತ್ತಿದ್ದು, ಈ ವೇಳೆ ಐವರು ದುಷ್ಕರ್ಮಿಗಳು, ಹಾಲ್ ಒಳಗೆ ಬಂದು ದೊಣ್ಣೆಗಳಿಂದ ಆತನ ಮೇಲೆ ಹಲ್ಲೆ ಮಾಡಿದ್ದಾರೆ.

ಪರೀಕ್ಷೆ ನಡೆಯುವಾಗಲೇ ದುಷ್ಕರ್ಮಿಗಳು, ಈ ಕೃತ್ಯ ಎಸಗಿರುವುದು ಕೊಠಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಪರೀಕ್ಷೆ ಬರೆಯುವಾಗಲೇ ಈ ಘಟನೆ ನಡೆದಿರುವುದು ಇತರೆ ಪರೀಕ್ಷಾರ್ಥಿಗಳಿಗೆ ಆತಂಕ ಮೂಡಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...