alex Certify
ಕನ್ನಡ ದುನಿಯಾ       Mobile App
       

Kannada Duniya

ಗುರಿ ತಪ್ಪಿದ ಗುಂಡಿಗೆ ಬಾಲಕ ಬಲಿ

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಹೊಡೆದ ಗುಂಡು ಗುರಿತಪ್ಪಿ ಗುಂಪಿನಲ್ಲಿದ್ದ ಬಾಲಕನಿಗೆ ತಾಗಿ ಆತ ಮೃತಪಟ್ಟ ಘಟನೆ ಉತ್ತರಪ್ರದೇಶದಲ್ಲಿ ಭಾನುವಾರ ನಡೆದಿದೆ.

ಉತ್ತರಪ್ರದೇಶದ ಇಟಾ ಜಿಲ್ಲೆಯ ಭದ್ಯುಯ ಮಠ್ ಗ್ರಾಮದಲ್ಲಿ “ಭಗವದ್ ಕಥಾ” ಧಾರ್ಮಿಕ ಕಾರ್ಯಕ್ರಮಕ್ಕಾಗಿ ಜನ ನೆರೆದಿದ್ದರು. ಈ ಸಂದರ್ಭದಲ್ಲಿ ನಡೆಯವ “ಕಂಸ ವಧಾ” ವೇಳೆ, ದೇವಸ್ಥಾನದ ಬಳಿಯ ಮರಕ್ಕೆ ನೇತುಹಾಕಿದ ಕಂಸನ ಪ್ರತಿಕೃತಿಗೆ ಗುಂಡಿನಿಂದ ಹೊಡೆಯಲಾಗುತ್ತದೆ.

ಆಗ ಒಂದು ಗುಂಡು ಗುರಿ ತಪ್ಪಿ 14 ವರ್ಷದ ಬಾಲಕನಿಗೆ ತಗುಲಿ ಆತ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಪ್ರತಿವರ್ಷ ಇಂಥ ಪ್ರಕರಣಗಳಲ್ಲಿ ಸಾಕಷ್ಟು ಜನ ಸಾವಿಗೀಡಾಗುತ್ತಿದ್ದರೂ ಕಾನೂನು ಕ್ರಮ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ ಎನ್ನಲಾಗಿದೆ. ಅ. 12 ರಲ್ಲೂ ಇಂಥದ್ದೇ ಒಂದು ಕಾರ್ಯಕ್ರಮದಲ್ಲಿ ಬದುನ್ ಗ್ರಾಮದ 12 ವರ್ಷದ ಬಾಲಕಿ ಮೃತಪಟ್ಟಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...