alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಿಂದ ತಪ್ಪಿಸಿಕೊಳ್ಳಲು ಮಾಡಿದ್ದಾಳೆ ಈ ಪ್ಲಾನ್

marriage

20-30 ವರ್ಷದವರೆಲ್ಲ ಸಾಮಾನ್ಯವಾಗಿ ಮದುವೆ, ಸಂಗಾತಿಯ ಬಗ್ಗೆ ಕನಸು ಕಾಣ್ತಾರೆ. ಆದ್ರೆ ಉತ್ತರಪ್ರದೇಶದಲ್ಲಿ 25 ವರ್ಷದ ಯುವತಿಯೊಬ್ಬಳು ಮದುವೆಯಿಂದ ತಪ್ಪಿಸಿಕೊಳ್ಳಲು ಚುನಾವಣೆಗೆ ಸ್ಪರ್ಧಿಸುತ್ತಿದ್ದಾಳೆ. ವಂದನಾ ಶರ್ಮಾ ಈಗ ಫತೇಪುರ ಸಿಕ್ರಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ.

ವಂದನಾ ತನ್ನೂರಿನಿಂದ ಸುಮಾರು 40 ಕಿಲೋ ಮೀಟರ್ ದೂರ ಒಬ್ಬಂಟಿಯಾಗಿ ಸ್ಕೂಟರ್ ಓಡಿಸಿಕೊಂಡು ನಾಮಪತ್ರ ಸಲ್ಲಿಸಲು ಬಂದಿದ್ಲು. ಫಲಿತಾಂಶದ ಬಗ್ಗೆ ಆಕೆ ತಲೆಕೆಡಿಸಿಕೊಂಡಿಲ್ವಂತೆ. ಹಣ ಹಾಗೂ ತೋಳ್ಬಲದ ವಿರುದ್ಧ ನಾನು ಸ್ಪರ್ಧಿಸಿದ್ದೇನೆ ಎನ್ನುತ್ತಾಳೆ ವಂದನಾ. ಆಗ್ರಾ ಕಾಲೇಜಿನಲ್ಲಿ ಪದವಿ ಪಡೆದಿರೋ ವಂದನಾಗೆ  ಮದುವೆಯಾಗಲು ಇದು ಸುಸಮಯ ಅನ್ನೋದು ಕುಟುಂಬದವರ ಅಭಿಪ್ರಾಯ.

ಆದ್ರೆ ವಿವಾಹಕ್ಕೂ ಮುನ್ನ ಸ್ವಂತವಾಗಿ ಏನನ್ನಾದ್ರೂ ಮಾಡಬೇಕು ಅನ್ನೋದು ಅವಳ ಆಸೆ. ಮದುವೆಯಾಗು ಅಂತಾ ಮನೆಯವರು ಒಂದೇ ಸಮನೆ ಬಲವಂತ ಮಾಡ್ತಾ ಇದ್ರು, ಚುನಾವಣೆಗೆ ಸ್ಪರ್ಧಿಸಿದ್ರೆ ಅದರಿಂದ ತಪ್ಪಿಸಿಕೊಳ್ಳಬಹುದು, ನಾನೂ ಏನನ್ನಾದ್ರೂ ಮಾಡಬಲ್ಲೆ ಅನ್ನೋದು ಕುಟುಂಬದವರಿಗೆ ಅರಿವಾಗಬಹುದು ಅನ್ನೋದು ವಂದನಾಳ ಲೆಕ್ಕಾಚಾರ. ಚುನಾವಣೆಗೆ ಸ್ಪರ್ಧಿಸುವ ವಂದನಾ ನಿರ್ಧಾರವನ್ನು ಮನೆಯವರು ಮೊದಲು ಒಪ್ಪಿರಲಿಲ್ಲ, ಆದ್ರೆ ಸಹೋದರ ಸುಶೀಲ್ ಆಕೆಗೆ ಸಾಥ್ ಕೊಟ್ಟಿದ್ದ. ಈಗ ಸ್ಕೂಟಿ ಏರಿ ಕ್ಷೇತ್ರದಾದ್ಯಂತ ವಂದನಾ ಪ್ರಚಾರ ಮಾಡ್ತಿದ್ದಾಳೆ. ಮತದಾರರು ಅವಳ ಕೈಹಿಡೀತಾರಾ ಅನ್ನೋದನ್ನು ಕಾದು ನೋಡ್ಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...