alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ವಿರುದ್ಧ ರಾಹುಲ್-ಅಖಿಲೇಶ್ ವಾಗ್ದಾಳಿ

rahul_y1ztdnc-1

ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ರಂಗು ಪಡೆಯುತ್ತಿದೆ. ರಾಜಕಾರಣಿಗಳ ದಂಡೇ ಉತ್ತರ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ಘಟಾನುಘಟಿಗಳು ಭರ್ಜರಿ ಪ್ರಚಾರ, ರ್ಯಾಲಿಯಲ್ಲಿ ನಿರತರಾಗಿದ್ದಾರೆ. ಉತ್ತರ ಪ್ರದೇಶ ಪ್ರತಿಷ್ಠೆಯ ಕಣ. ಬಿಜೆಪಿ ವಿರುದ್ಧ ಎಸ್ಪಿ ಹಾಗೂ ಕಾಂಗ್ರೆಸ್ ಒಂದಾಗಿದ್ದು ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಅಬ್ಬರದ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಸ್ಪಿ ನಾಯಕ ಅಖಿಲೇಶ್ ಯಾದವ್ ಭಾನುವಾರ ರ್ಯಾಲಿ ನಡೆಸಿ ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ. ಕಾನ್ಪುರದಲ್ಲಿ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಗುಡುಗಿದ್ದಾರೆ.

ನಿಮ್ಮ ಮುಂದೆ ಇಬ್ಬರು ಯುವಕರು ಎದ್ದು ನಿಂತಿದ್ದೇವೆ. ಒಂದು ನಾನು ಮತ್ತು ಇನ್ನೊಂದು ಅಖಿಲೇಶ್. ಇನ್ನೊಂದು ಕಡೆ ಮೋದಿ ಇದ್ದಾರೆ. ಮೋದಿ ಮನಸ್ಸಿನಲ್ಲಿ ಏನು ಬರುತ್ತೋ ಅದನ್ನು ಹೇಳಿ ಬಿಡ್ತಾರೆ. ನಿಮಗೆ 15 ಲಕ್ಷ ಸಿಕ್ಕಿದೆಯಾ? ಕಾಂಗ್ರೆಸ್ –ಎಸ್ಪಿ ಒಂದಾಗ್ತಾ ಇದ್ದಂತೆ ಮೋದಿ ಮುಖದಲ್ಲಿದ್ದ ಕಳೆ ಕಣ್ಮರೆಯಾಗಿದೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

ಮೋದಿ ಎಷ್ಟು ಸುಳ್ಳು ಹೇಳ್ತಾರೆನ್ನುವುದು ಇಡೀ ದೇಶಕ್ಕೆ ಗೊತ್ತು. ಬಿಹಾರ ಚುನಾವಣೆ ನಂತ್ರ ಬಿಹಾರದ ಹೆಸರನ್ನು ಮೋದಿ ಮರೆತಿದ್ದಾರೆ. ಉತ್ತರ ಪ್ರದೇಶ ಚುನಾವಣೆ ನಂತ್ರ ಉತ್ತರ ಪ್ರದೇಶದ ಹೆಸರು ಮರೆಯುತ್ತಾರೆಂದು ರಾಹುಲ್ ಹೇಳಿದ್ದಾರೆ.

ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಸ್ಪಿ ನಾಯಕ ಅಖಿಲೇಶ್ ಯಾದವ್ ಕೂಡ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...