alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂದರ ವಿಡಿಯೋ ಮೂಲಕ ಮಹತ್ವದ ಸಂದೇಶ ನೀಡಿದ ಯುಪಿ ಪೊಲೀಸರು

ದೇಶ ಹಾಗೂ ವಿದೇಶದಲ್ಲಿ ಪರಸ್ಪರ ಒಪ್ಪಿಗೆ ಬಗ್ಗೆ ಅನೇಕ ಲೇಖನಗಳು ಪ್ರಕಟವಾಗಿವೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಹೇಳ್ತಿರುತ್ತಾರೆ. 2016ರಲ್ಲಿ ಅನಿರುದ್ಧ್ ರಾಯ್ ಪಿಂಕ್ ಚಿತ್ರದ ಮೂಲಕ, ಯಾರಾದ್ರೂ ಇಲ್ಲ ಎಂದ್ರೆ ಅವ್ರ ಭಾವನೆಗಳಿಗೆ ಗೌರವ ನೀಡಬೇಕೆಂದು ಚಿತ್ರದಲ್ಲಿ ಹೇಳಲಾಗಿತ್ತು. ಮುಂಬೈ ಹಾಗೂ ದೆಹಲಿ ಪೊಲೀಸರ ಸೃಜನಶೀಲ ಮತ್ತು ಆಕರ್ಷಕ ಪ್ರಚಾರದ ನಂತ್ರ ಉತ್ತರ ಪ್ರದೇಶ ಪೊಲೀಸರು ವಿಭಿನ್ನ ಕೆಲಸಕ್ಕೆ ಕೈ ಹಾಕಿದ್ದಾರೆ.

ಸಮಾಜದಲ್ಲಿ ಮಹಿಳೆಯರ ಮೇಲೆ ಹೇರುತ್ತಿರುವ ಬಲವಂತ ಹೆಚ್ಚಾಗ್ತಿದೆ. ಇದನ್ನು ನಿಯಂತ್ರಿಸಲು ಉತ್ತರ ಪ್ರದೇಶ ಪೊಲೀಸರು ವಿಡಿಯೋ ಒಂದನ್ನು ಟ್ವಿಟ್ ಮಾಡಿದ್ದಾರೆ. ಪೊಲೀಸರು ಟಿಂಡರ್ ಆ್ಯಪ್ ನ ಪ್ರಚಾರದ ವಿಡಿಯೋ ಒಂದನ್ನು ಟ್ವಿಟ್ ಮಾಡಿ ಇದ್ರ ಮೂಲಕ ಸಂದೇಶ ರವಾನೆ ಮಾಡಿದ್ದಾರೆ.

ಒಂದು ಆಪ್ ಒಪ್ಪಿಗೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತದೆ. ಆದ್ರೆ ನೀವ್ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲವೆಂದು ಪೊಲೀಸರು ಪ್ರಶ್ನೆಯಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಸುಂದರ ಹುಡುಗನನ್ನು ಹುಡುಗಿಯೊಬ್ಬಳು ನೋಡ್ತಾಳೆ. ಹುಡುಗಿ ಬಲ ಕೈ ಬಳಸಿ ಸ್ವೈಪ್ ಮಾಡ್ತಾಳೆ. ಆದ್ರೆ ಹುಡುಗ ಎಡಗೈ ನಿಂದ ಸ್ವೈಪ್ ಮಾಡ್ತಾನೆ. ಇಬ್ಬರೂ ಬಲಗೈನಿಂದ ಸ್ವೈಪ್ ಮಾಡಿದ್ರೆ ಮಾತ್ರ ಟಿಂಡರ್ ನಲ್ಲಿ ಡೇಟಿಂಗ್ ಸಾಧ್ಯವೆಂದು ವಿಡಿಯೋದಲ್ಲಿ ಹೇಳಲಾಗಿದೆ. ಇದನ್ನು ಉತ್ತರ ಪ್ರದೇಶ ಪೊಲೀಸರು ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...