alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಿ ರ್ಯಾಲಿಯಲ್ಲಿ ಮಹಿಳೆಗೆ ಅವಮಾನ…?

ಉತ್ತರ ಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನಡೆಸುತ್ತಿದ್ದ ರ್ಯಾಲಿ ವೇಳೆ ಮುಸ್ಲಿಂ ಮಹಿಳೆ ಬುರ್ಕಾವನ್ನು ಎಲ್ಲರೆದುರು ತೆಗೆಸಲಾಗಿದೆ. ಈ ಮಹಿಳೆ ಬಿಜೆಪಿ ಕಾರ್ಯಕರ್ತೆ ಎನ್ನಲಾಗಿದೆ.

ಮಂಗಳವಾರ ಬಾಲಿಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ರ್ಯಾಲಿ ನಡೆಸಿದ್ದಾರೆ. ಯೋಗಿ ಭಾಷಣ ಕೇಳಲು ಸಾಯಿರಾ ಬಾನು ಹೆಸರಿನ ಮಹಿಳೆ ಬಂದಿದ್ದಳು ಎನ್ನಲಾಗಿದೆ. ಭದ್ರತೆ ಹೆಸರಿನಲ್ಲಿ ಮೊದಲು ಸಾಯಿರಾ ಬುರ್ಕಾ ತೆಗೆಯುವಂತೆ ಹೇಳಿದ್ದಾರೆ. ಮೊದಲು ಮುಖದ ಮೇಲಿದ್ದ ಬುರ್ಕಾ ತೆಗೆದ ಸಾಯಿರಾ ಮುಖವನ್ನು ಸೀರೆ ಸೆರಗಿನಿಂದ ಮುಚ್ಚಿಕೊಂಡಿದ್ದಾಳೆ.

ಆದ್ರೆ ಮಹಿಳಾ ಪೊಲೀಸ್ ಸಿಬ್ಬಂದಿ ಅಷ್ಟಕ್ಕೆ ಬಿಡಲಿಲ್ಲ. ಸಾಯಿರಾಗೆ ಪೂರ್ತಿ ಬುರ್ಕಾ ಬಿಚ್ಚುವಂತೆ ಹೇಳಿದ್ದಾರೆ. ಬುರ್ಕಾ ಸಿಕ್ಕಿ ಹಾಕಿಕೊಂಡಿದ್ದರಿಂದ ಅಕ್ಕಪಕ್ಕದಲ್ಲಿದ್ದ ಮಹಿಳೆಯರು ಬುರ್ಕಾ ತೆಗೆಯಲು ನೆರವಾಗಿದ್ದಾರೆ. ನಂತ್ರ ಬುರ್ಕಾವನ್ನು ತನ್ನ ಬಳಿಯಿಟ್ಟುಕೊಳ್ಳಲು ಮುಂದಾದ ಸಾಯಿರಾಳನ್ನು ತಡೆದ ಪುರುಷ ಪೊಲೀಸ್ ಸಿಬ್ಬಂದಿ ಬುರ್ಕಾ ಕಸಿದುಕೊಂಡು ಹೋಗಿದ್ದಾನಂತೆ.

ಮನೆಯಿಂದ ಹೊರಗೆ ಹೋಗುವ ವೇಳೆ ಸದಾ ಬುರ್ಕಾ ಧರಿಸುತ್ತೇನೆ. ಎಂದೂ ಈ ರೀತಿ ಆಗಿರಲಿಲ್ಲವೆಂದು ಸಾಯಿರಾ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಬೋರ್ಡ್ ಅಧ್ಯಕ್ಷರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಭದ್ರತೆ ಚೆಕ್ಕಿಂಗ್ ಮುಚ್ಚಿನ ಪರದೆ ಹಿಂದೆ ನಡೆಯುತ್ತದೆ. ಆದ್ರೆ ಎಲ್ಲರ ಎದುರಲ್ಲಿ ಇದು ನಡೆದಿದ್ದು, ಕಾನೂನುಬಾಹಿರ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...