alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ಪೇದೆ

ಲಕ್ನೋ: ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ ನಡೆಸಿದ ಪೊಲೀಸ್‌ ಪೇದೆ ಹಾಗೂ ಪಿಆರ್‌ವಿ ಇನ್‌ಚಾರ್ಜ್‌ನ್ನು ಅಮಾನತ್ತುಗೊಳಿಸಿ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ.

ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು. ಆ.22 ರಂದು ಸಾರ್ವಜನಿಕರ ಮುಂದೆಯೇ ಆಟೋ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿದ್ದ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿತ್ತು. ಪೇದೆ ಆನಂದ್‌ ಪ್ರತಾಪ್‌ ಸಿಂಗ್‌ ಆಟೋ ಚಾಲಕನಿಗೆ ಥಳಿಸುತ್ತಿದ್ದ ದೃಶ್ಯ ವಿಡಿಯೋ ಮಾಡಲಾಗಿತ್ತು. ಘಟನೆ ವೇಳೆ ನೆರೆದವರು ಮೂಕಪ್ರೇಕ್ಷಕರಾಗಿದ್ದರು.

ಚೌರಾಹದಲ್ಲಿನ ಎಂಜಿನಿಯರಿಂಗ್‌ ಕಾಲೇಜಿನ ಬಳಿ ಎರಡು ರಿಕ್ಷಾಗಳ ನಡುವೆ ಸಣ್ಣ ಅಫಘಾತ ಸಂಭವಿಸಿದೆ. ಈ ವಿಚಾರ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪೊಲೀಸ್‌ ಗಸ್ತು ಪಡೆಯಲ್ಲಿದ್ದ ಪ್ರತಾಪ್‌ ಸಿಂಗ್‌ ಹಾಗೂ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಪ್ರತಾಪ್‌ ಸಿಂಗ್‌ ಆಟೋ ಚಾಲಕನ ಮೇಲೆ ಯಾವುದೇ ರೀತಿಯ ವಿಚಾರಣೆ ನಡೆಸದೆ, ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ಈ ಸಂಪೂರ್ಣ ದೃಶ್ಯ ವಿಡಿಯೋ ಚಿತ್ರೀಕರಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...