alex Certify
ಕನ್ನಡ ದುನಿಯಾ       Mobile App
       

Kannada Duniya

ಡಾನ್ಸರ್ ನೋಡಿ ಮೈಮರೆತ ಪೊಲೀಸ್ ಪೇದೆ ಮಾಡಿದ್ದೇನು…?

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಡಾನ್ಸರ್ ಒಬ್ಬಳ ಮೇಲೆ ಹಣದ ಮಳೆ ಸುರಿಸಿದ ಪೊಲೀಸ್ ಪೇದೆಯನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ನವೆಂಬರ್ 13ರಂದು ಈ ಘಟನೆ ನಡೆದಿದೆ. ವಜಾಗೊಂಡಿರುವ ಪೊಲೀಸ್ ಪೇದೆ ಚಂದ್ರಕೇಶ್ ಭಾಸ್ಕರ್, ಧನೇಪುರ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.

ಗೊಂಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವತಿ ನೃತ್ಯ ಮಾಡುತ್ತಿದ್ಲು. ಆಗ ಪೇದೆ ಚಂದ್ರಕೇಶ್ ಅವಳ ಮೇಲೆ ನೋಟುಗಳ ರಾಶಿಯನ್ನೇ ಸುರಿದಿದ್ದಾನೆ. 46 ಸೆಕೆಂಡ್ ಗಳ ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು.

ಕೈಯಲ್ಲಿ ನೋಟಿನ್ ಬಂಡಲ್ ಹಿಡಿದುಕೊಂಡಿದ್ದ ಪೇದೆ, ಅದನ್ನು ನೃತ್ಯಗಾತಿಯ ಮೇಲೆ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು. ಕಾರ್ಯಕ್ರಮದಲ್ಲಿ ಹಾಜರಿದ್ದವರೆಲ್ಲ ಆ ನೋಟುಗಳನ್ನು ಆಯ್ದುಕೊಳ್ಳುವುದದಲ್ಲೇ ಬ್ಯುಸಿಯಾಗಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...