alex Certify
ಕನ್ನಡ ದುನಿಯಾ       Mobile App
       

Kannada Duniya

ರೈತರ ಹೆಸರಿನಲ್ಲಿ ಅಧಿಕಾರಿಗಳಿಂದ ನಾಚಿಕೆಗೇಡಿ ಕೃತ್ಯ

ರೈತನೇ ದೇಶದ ಬೆನ್ನೆಲೆಬು ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳಲಾಗುತ್ತದೆ. ವಾಸ್ತವವಾಗಿ ಶ್ರಮಪಟ್ಟು ದುಡಿದ ರೈತರಿಗೆ ಅವರ ಶ್ರಮದ ಫಲವೇ ದೊರಕುತ್ತಿಲ್ಲ. ಈ ಕಾರಣಕ್ಕಾಗಿಯೇ ಇಂದು ಗ್ರಾಮೀಣ ಪ್ರದೇಶದ ಜನತೆ ನಗರ ಪ್ರದೇಶದತ್ತ ಗುಳೆ ಹೋಗುತ್ತಿದ್ದಾರೆ.

ಇಷ್ಟಾದರೂ ಬುದ್ದಿ ಕಲಿಯದ ಅಧಿಕಾರಿಗಳು, ರೈತರ ಹೆಸರಿನಲ್ಲಿ ಹಣ ದೋಚುತ್ತಿದ್ದು, ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ಸರ್ಕಾರ ನೀಡಿದ್ದ ಬೆಂಬಲ ಬೆಲೆಯನ್ನೇ ತಮ್ಮ ಹಣ ಕಮಾಯಿಗೆ ಬಳಸಿಕೊಂಡ ಅಧಿಕಾರಿಗಳು ರೈತರ ಹೆಸರಿನಲ್ಲಿ ಸುಮಾರು 527 ನಕಲಿ ಹೆಸರುಗಳನ್ನು ಸೃಷ್ಟಿಸಿರುವ ಪ್ರಕರಣ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಮಧ್ಯವರ್ತಿಗಳ ನೆರವಿನೊಂದಿಗೆ 527 ನಕಲಿ ಹೆಸರನ್ನು ದಾಖಲೆ ಸಮೇತ ಸೃಷ್ಟಿಸಿದ್ದ ಅಧಿಕಾರಿಗಳು ಎರಡು ಕೋಟಿ ರೂಪಾಯಿ ಕಬಳಿಸಲು ಮುಂದಾಗಿದ್ದಾರೆ. ಆದರೆ ಈ ಕುರಿತು ಅನುಮಾನಗೊಂಡ ಹಿರಿಯ ಅಧಿಕಾರಿಗಳು ದಾಖಲೆಯೊಂದಿಗೆ ಹಾಜರಾಗಲು ರೈತರಿಗೆ ನೋಟೀಸ್ ನೀಡಿದ ವೇಳೆ ಅಕ್ರಮ ಬೆಳಕಿಗೆ ಬಂದಿದೆ. ಈಗ ತನಿಖೆಗೆ ಆದೇಶಿಸಲಾಗಿದ್ದು, ಅಕ್ರಮವೆಸಗಿದ ಅಧಿಕಾರಿಗಳಿಗೆ ಬಂಧನ ಭೀತಿ ಎದುರಾಗಿದೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...