alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಮೋದಿ ಫೋಟೋ ಕಳಿಸಿದ್ದ ಅಧಿಕಾರಿ ಅಮಾನತು

pm_modi-reuters

ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಧಾನಿ ಮೋದಿ ಅವರ ಆಕ್ಷೇಪಾರ್ಹ ಚಿತ್ರಗಳನ್ನು ಪ್ರಕಟಿಸಿದ್ದಕ್ಕೆ ಉತ್ತರಪ್ರದೇಶದಲ್ಲಿ ಪಂಚಾಯ್ತಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದ್ದು, ಕಾಲೇಜು ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ಅವರು ಕ್ರಿಯೇಟ್ ಮಾಡಿದ್ದ ವಾಟ್ಸಾಪ್ ಗ್ರೂಪ್ ನಲ್ಲಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಹಿಫಾಜತ್ ಉಲ್ಲಾ ಖಾನ್, ಮೋದಿ ಅವರ ಫೋಟೋವನ್ನು ಹಾಕಿದ್ರು.

ಬಹೇದಿ ಪಂಚಾಯತ್ ನಲ್ಲಿ ಅಧಿಕಾರಿಯಾಗಿರೋ ಹಿಪಾಜತ್ ಉಲ್ಲಾ ಖಾನ್ ಗೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿತ್ತು. ಆದ್ರೆ ಅದಕ್ಕವರು ತೃಪ್ತಿದಾಯಕ ಪ್ರತಿಕ್ರಿಯೆ ನೀಡದೇ ಇದ್ದಿದ್ರಿಂದ ಅಮಾನತು ಮಾಡಲಾಗಿದೆ. ಕಾಲೇಜು ಮ್ಯಾನೇಜರ್ ಹರಿ ಓಂ ಸಿಂಗ್ ಕೂಡ ಮೋದಿ ಅವರ ಆಕ್ಷೇಪಾರ್ಹ ಫೋಟೋಗಳನ್ನು ವಾಟ್ಸಾಪ್ ನಲ್ಲಿ ಕಳುಹಿಸುತ್ತಿದ್ರು. ಅವರ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ರವೀಂದ್ರ ಸಿಂಗ್ ರಾಥೋಡ್ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...