alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಕರನಿಗೆ ಠಾಣೆಯಲ್ಲೇ ವಿವಾಹಿತೆಯಿಂದ ಚಪ್ಪಲಿ ಏಟು

slipperಮೂರು ಮಕ್ಕಳ ವಿವಾಹಿತೆ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದವನೊಬ್ಬ ಪರಾರಿಯಾಗಿ ವಿವಾಹವಾಗುವ ಆಮಿಷವೊಡ್ಡಿ ಕಡೆ ಕ್ಷಣದಲ್ಲಿ ಹಿಂದೇಟು ಹಾಕಿದ ಕಾರಣ ರೊಚ್ಚಿಗೆದ್ದ ಮಹಿಳೆ, ಪೊಲೀಸ್ ಠಾಣೆಯಲ್ಲೇ ಆತನಿಗೆ ಚಪ್ಪಲಿ ಸೇವೆ ಮಾಡಿದ ಘಟನೆ ಉತ್ತರ ಪ್ರದೇಶದ ಗಜ್ನೀರ್ ನಲ್ಲಿ ನಡೆದಿದೆ.

ಗಜ್ನೀರ್ ನ ಪತ್ರಾ ಗ್ರಾಮದ ಈ ಮಹಿಳೆ, ನೆರೆಮನೆಯ ನಿವಾಸಿ 30 ವರ್ಷದ ಬಲ್ಜೀತ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳೆನ್ನಲಾಗಿದ್ದು, ಮೂರು ಮಕ್ಕಳ ತಾಯಿಯಾಗಿರುವ ಆಕೆಗೆ, ವಿವಾಹವಾಗುವ ಆಮಿಷವೊಡ್ಡಿದ್ದ ಬಲ್ಜೀತ್ ಪರಾರಿಯಾಗಿ ವಿವಾಹ ಮಾಡಿಕೊಳ್ಳುವ ಭರವಸೆ ನೀಡಿದ್ದನೆನ್ನಲಾಗಿದೆ.

ಆದರೆ ಬಲ್ಜೀತ್ ಮಾತು ತಪ್ಪಿದ ವೇಳೆ ರೊಚ್ಚಿಗೆದ್ದ ಮಹಿಳೆ, ಆತನಿಗೆ ಚಪ್ಪಲಿ ಸೇವೆ ಮಾಡಿದ್ದು, ಆಕೆಯ ಗಂಡನಿಗೂ ಇದು ಅಚ್ಚರಿ ತರಿಸಿದೆ. ಕಡೆಗೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಅಲ್ಲಿ ಮಹಿಳೆ ತನಗೆ ಬಲ್ಜೀತ್ ನೀಡಿದ್ದ ಭರವಸೆ ಕುರಿತು ಹೇಳಿದ್ದಾಳೆ. ಅದನ್ನು ಆತ ನಿರಾಕರಿಸಿದಾಗ ಪೊಲೀಸ್ ಠಾಣೆಯಲ್ಲಿಯೇ ಮತ್ತೊಮ್ಮೆ ಚಪ್ಪಲಿ ಸೇವೆ ಮಾಡಿದ್ದಾಳೆ. ಇದೀಗ ಪ್ರಕರಣ ರಾಜಿ ಪಂಚಾಯಿತಿಯಲ್ಲಿ ಅಂತ್ಯವಾಗಿದೆ ಎನ್ನಲಾಗಿದ್ದು, ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿದರೆ ಕ್ರಮ ಕೈಗೊಳ್ಳುವುದಾಗಿ ಕಾನ್ಪುರದ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...