alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚಾಗಬೇಕಿದೆ ಇಂತಹ ರಾಜಕಾರಣಿಗಳು

ಲಖ್ನೋ: ಉತ್ತರ ಪ್ರದೇಶದ ಬಿ.ಜೆ.ಪಿ. ಶಾಸಕರೊಬ್ಬರು ಮಾಡಿದ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಫರೂಕಾಬಾದ್ ಶಾಸಕ ಸುನಿಲ್ ದತ್ ದ್ವಿವೇದಿ ಇಂತಹ ಕೆಲಸ ಮಾಡಿದವರು. ಅಪಘಾತದಲ್ಲಿ ಗಾಯಗೊಂಡವರನ್ನು ಹೆಗಲ ಮೇಲೆ ಹೊತ್ತುಕೊಂಡು, ಅವರನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಫರೂಕಾಬಾದ್ –ಫತೇಪುರ್ ರಸ್ತೆಯ ಭೀಮಸೇನ್ ಮಾರ್ಕೇಟ್ ಬಳಿ, 2 ಬೈಕ್ ಹಾಗೂ ಸೈಕಲ್ ನಡುವೆ ಅಪಘಾತ ಸಂಭವಿಸಿ, ಗಾಯಗೊಂಡ ಮೂವರು ರಸ್ತೆಯಲ್ಲಿ ಬಿದ್ದಿದ್ದಾರೆ.

ಇದನ್ನು ಗಮನಿಸಿದ ಶಾಸಕ ಸುನಿಲ್ ದತ್ ದ್ವಿವೇದಿ, ತಮ್ಮ ಸಹಾಯಕನ ನೆರವಿನಿಂದ ಗಾಯಾಳುಗಳನ್ನು ತಾವೇ ಹೊತ್ತು ಕಾರಿನಲ್ಲಿ ಕೂರಿಸಿದ್ದಾರೆ.

ಫರೂಕಾಬಾದ್ ನ ಲೋಹಿಯಾ ಆಸ್ಪತ್ರೆ ಬಳಿ ಕಾರಿನಿಂದ ವಾರ್ಡ್ ವರೆಗೆ ತಾವೇ ಗಾಯಾಳು ಒಬ್ಬನನ್ನು ಹೊತ್ತು ಕೊಂಡು ಹೋಗಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅರವಿಂದ್ ಸಿಂಗ್, ರಿಶಬ್, ರಾಮೇಶ್ವರ್ ಸಿಂಗ್ ಅಪಘಾತದಲ್ಲಿ ಗಾಯಗೊಂಡವರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...