alex Certify
ಕನ್ನಡ ದುನಿಯಾ       Mobile App
       

Kannada Duniya

‘ಮಕ್ಕಳನ್ನು ಶಾಲೆಗೆ ಕಳಿಸದ ಪೋಷಕರಿಗೆ ಜೈಲು’

ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರನ್ನು ಬಂಧಿಸಿ, ಅನ್ನ ನೀರು ಕೊಡದೇ ಕಂಬಿ ಹಿಂದೆ ತಳ್ಳುವುದಾಗಿ ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ ಭರ್ ಎಚ್ಚರಿಕೆ ನೀಡಿದ್ದಾರೆ. ಅದರ ಜೊತೆಗೆ ದಂಡ ಕೂಡ ವಿಧಿಸೋದಾಗಿ ಹೇಳಿದ್ದಾರೆ. ಸಚಿವರ ಈ ಹೇಳಿಕೆ ವೈರಲ್ ಆಗಿದೆ.

ಯಾವ ಮಕ್ಕಳು ಶಾಲೆಗೆ ಹೋಗುವುದಿಲ್ಲವೋ ಅವರ ಹೆತ್ತವರು 5 ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಉಪವಾಸ ಕೂರಬೇಕಾಗುತ್ತದೆ, ನಾನು ನನ್ನ ಆಯ್ಕೆಯ ಈ ಕಾನೂನನ್ನು ಜಾರಿ ಮಾಡುತ್ತೇನೆ. ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರನ್ನು ಪೊಲೀಸರೇ ಬಂದು ಕರೆದೊಯ್ಯುತ್ತಾರೆ ಅಂತಾ ಹೇಳಿದ್ದಾರೆ.

ಸಚಿವರ ಭಾಷಣದ ವಿಡಿಯೋ ಬಗ್ಗೆ ವಿವಾದ ಕೂಡ ಶುರುವಾಗಿದೆ. ಆದ್ರೆ ಓಂ ಪ್ರಕಾಶ್ ಮಾತ್ರ ತಮ್ಮ ಹೇಳಿಕೆಗೆ ಬದ್ಧ ಅಂತಾ ಸ್ಪಷ್ಟಪಡಿಸಿದ್ದಾರೆ. ಶಿಕ್ಷಣಕ್ಕಾಗಿ ಸರ್ಕಾರ ಇಷ್ಟೊಂದು ಸೌಲಭ್ಯ ನೀಡುತ್ತಿದ್ದರೂ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಹಾಗಾಗಿ ಈ ಕ್ರಮ ಅನಿವಾರ್ಯ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...