alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದೂ ಸಂಪ್ರದಾಯದಂತೆ ಗಿಳಿಯ ಅಂತ್ಯಸಂಸ್ಕಾರ

ಉತ್ತರ ಪ್ರದೇಶದ ಅಮ್ರೋಹಾ ಎಂಬಲ್ಲಿ ವ್ಯಕ್ತಿಯೊಬ್ಬ ಗಿಳಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ. ಪಂಕಜ್ ಕುಮಾರ್ ಮಿತ್ತಲ್ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. 5 ವರ್ಷಗಳ ಹಿಂದೆ ಪಂಕಜ್ ಗಿಳಿಯೊಂದನ್ನು ದತ್ತು ಪಡೆದಿದ್ದ.

ಆಗ ಗಿಳಿಗೆ ಕಾಲು ಮುರಿದು ಹೋಗಿತ್ತು. ಹಾರಲು ಕೂಡ ಸಾಧ್ಯವಾಗುತ್ತಿರಲಿಲ್ಲ. ನೋವಿನಿಂದ ಒದ್ದಾಡುತ್ತಿದ್ದ ಹಕ್ಕಿಗೆ ತನ್ನ ಮಗುವಿನಂತೆ ಪಂಕಜ್ ಉಪಚರಿಸಿದ್ದ. ಮುದ್ದಾಗಿ ಸಾಕಿದ್ದ ಗಿಳಿ ಮಾರ್ಚ್ 5ರಂದು ಮೃತಪಟ್ಟಿದೆ.

ಮೃತ ಗಿಳಿಯನ್ನು ಹಾಗೇ ಹೂತು ಹಾಕುವುದು ಪಂಕಜ್ ಗೆ ಇಷ್ಟವಿರಲಿಲ್ಲ. ಆ ಪಕ್ಷಿ ಕೂಡ ಮನೆಯ ಸದಸ್ಯನಾಗಿದ್ದರಿಂದ ಹಿಂದೂ ಸಂಪ್ರದಾಯದಂತೆ ಅದರ ಅಂತ್ಯಸಂಸ್ಕಾರ ಮಾಡಲಾಗಿದೆ.

ಹವನಗಳನ್ನು ನಡೆಸಿ, ದಾನ ಧರ್ಮ ಮಾಡಿದ್ದಾನೆ ಪಂಕಜ್. ಬಳಿಕ ಗಂಗಾ ಘಾಟ್ ನಲ್ಲಿ ಗಿಳಿಯ ಅಸ್ಥಿಯನ್ನು ವಿಸರ್ಜಿಸಿದ್ದಾನೆ. ಅಷ್ಟೇ ಅಲ್ಲ ಗಿಳಿಯ ಆತ್ಮಶಾಂತಿಗಾಗಿ ಪ್ರಾರ್ಥನಾ ಸಭೆಯನ್ನು ಕೂಡ ಆಯೋಜಿಸಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...