alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೊಬ್ಬ ಅಪರೂಪದ ಐಪಿಎಸ್ ಅಧಿಕಾರಿ..!

ips

ಐಪಿಎಸ್ ಅಧಿಕಾರಿ ಅಂದಾಕ್ಷಣ ಶಿಸ್ತಿನ ಜೊತೆ ಗತ್ತು ಕೂಡ ಸಹಜ. ಸರ್ಕಾರ ಕೊಟ್ಟಿರುವ ಐಷಾರಾಮಿ ಕಾರಿನಲ್ಲಿ ಓಡಾಡುವವರೇ ಹೆಚ್ಚು. ಆದ್ರೆ ಕಾನ್ಪುರದ ಎಸ್ಪಿಯಾಗಿ ನೇಮಕಗೊಂಡಿರುವ ಪ್ರಭಾಕರ್ ಚೌಧರಿ ಅವರು ಮಾತ್ರ ಸರಳ, ಸಜ್ಜನ ಅಧಿಕಾರಿ.

2010 ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿರುವ ಪ್ರಭಾಕರ್ ನಿನ್ನೆಯಷ್ಟೆ ಕಾನ್ಪುರ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ್ರು. ಎಲ್ಲಾ ಅಧಿಕಾರಿಗಳಂತೆ ಅವರು ಕಚೇರಿಗೆ ಕಾರಿನಲ್ಲಿ ಬರಲಿಲ್ಲ, ತಮ್ಮ ಊರು ಲಖ್ನೋನಿಂದ ಸರ್ಕಾರಿ ಬಸ್ ಏರಿ ಜನಸಾಮಾನ್ಯರಂತೆ ಕಚೇರಿಗೆ ಆಗಮಿಸಿದ್ರು. ಅದರಲ್ಲಿ ಅಚ್ಚರಿಪಡುವಂಥದ್ದೇನಿಲ್ಲ, ಕರ್ತವ್ಯದಲ್ಲಿದ್ದಾಗ ಮಾತ್ರ ನಾನು ಸರ್ಕಾರಿ ವಾಹನ ಬಳಸ್ತೇನೆ, ಉಳಿದ ಸಮಯದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುತ್ತೇನೆ. ಸರ್ಕಾರಿ ವಾಹನವನ್ನು ಸ್ವಂತಕ್ಕೇಕೆ ಬಳಸಬೇಕು ಎನ್ನುತ್ತಾರೆ ಪ್ರಭಾಕರ್.

ಬಲಿಯಾ ಎಸ್ಪಿಯಾಗಿದ್ದ ಅವರನ್ನು 5 ದಿನಗಳ ಹಿಂದಷ್ಟೆ ಕಾನ್ಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಬಸ್ ನಲ್ಲಿ ಬಂದಿದ್ರಿಂದ ಪ್ರಭಾಕರ್ ಹೊಸದಾಗಿ ಬಂದಿರುವ ಎಸ್ಪಿ ಅನ್ನೋದು ಕಚೇರಿಯ ಸಿಬ್ಬಂದಿಗೆ ಗೊತ್ತೇ ಆಗಿರಲಿಲ್ಲ. ಅವರು ತಮ್ಮ ಪರಿಚಯ ಮಾಡಿಕೊಂಡ್ಮೇಲೆ ಅಯ್ಯೋ ನಮ್ ಸಾಹೇಬ್ರು ಇಷ್ಟು ಸಿಂಪಲ್ಲಾ ಅಂತಾ ಎಲ್ರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...