alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ಕಾರಣಕ್ಕೆ ಮುರಿದು ಬಿದ್ದಿದೆ ಮದುವೆ…!

ಉತ್ತರ ಪ್ರದೇಶದ ಅಮೋರಾ ಜಿಲ್ಲೆಯಲ್ಲಿ ವಿಚಿತ್ರವಾದ ರೀತಿಯಲ್ಲಿ ಮದುವೆಯೊಂದು ಮುರಿದು ಬಿದ್ದಿದೆ. ಮದುಮಗಳು ಅತಿಯಾಗಿ ವಾಟ್ಸಾಪ್ ಬಳಸುತ್ತಾಳೆ ಅನ್ನೋ ಕಾರಣಕ್ಕೆ ಮದುಮಗನ ಕಡೆಯವರು ಮದುವೆ ರದ್ದು ಮಾಡಿದ್ದಾರೆ. ಮದುವೆ ರದ್ದು ಮಾಡುವ ಸಂದೇಶವನ್ನು ಫೋನಿನಲ್ಲೇ ತಿಳಿಸಿದ್ದಾರೆ.

ಮದು ಮಗಳು ಮತ್ತಾಕೆಯ ಸಂಬಂಧಿಕರು ಮಂಟಪದಲ್ಲಿ ಕಾಯುತ್ತಿದ್ದರು. ಆಗ ಫೋನಿನಲ್ಲೇ ಮದುಮಗನ ತಂದೆ ತಮ್ಮ ಮಗನಿಗೆ ಮದುವೆ ಇಷ್ಟವಿಲ್ಲ. ನಿಮ್ಮ ಮಗಳು ಅತಿಯಾಗಿ ವಾಟ್ಸಾಪ್ ಮಾಡುತ್ತಾಳೆ ಅನ್ನೋ ಕಾರಣವನ್ನು ಮುಂದಿಟ್ಟಿದ್ದಾರೆ. ಆದ್ರೆ ವಧುವಿನ ಕಡೆಯವರು ಮದುವೆ ರದ್ದಾಗೋಕೆ ಮದುಮಗನ ಕಡೆಯವರು 65 ಲಕ್ಷ ರೂಪಾಯಿ ವರದಕ್ಷಿಣೆ ಡಿಮ್ಯಾಂಡ್ ಇಟ್ಟಿದ್ದರು ಅಂತ ಹೇಳ್ತಿದ್ದಾರೆ.

ಈ ಸಂಬಂಧ ವಧುವಿನ ತಂದೆ ಉರೋಜ್ ಮೆಹಂದಿ, ವರನ ತಂದೆ ಖಮರ್ ಹೈದರ್ ಮತ್ತು ಆತನ ಮನೆಯವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸೆಪ್ಟೆಂಬರ್ 5ನೇ ತಾರೀಕಿನಂದು ನಡೆಯಬೇಕಿದ್ದ ಮದುವೆ ಮುರಿದು ಬಿದ್ದ ಕಾರಣ ತಮಗೆ ಮಾನನಷ್ಟವಾಗಿದೆ ಅಂತ ವಧುವಿನ ತಂದೆ ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...