alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಕಲ್ ರಿಕ್ಷಾದಲ್ಲೇ ಮೃತದೇಹ ಕೊಂಡೊಯ್ದಿದೆ ಬಡ ಕುಟುಂಬ

rikshaw

ಉತ್ತರ ಪ್ರದೇಶ ಬಂದಾ ಎಂಬಲ್ಲಿ ಆ್ಯಂಬ್ಯುಲೆನ್ಸ್ ಸಿಗದೇ ಮೃತದೇಹವನ್ನು ಸೈಕಲ್ ರಿಕ್ಷಾದಲ್ಲಿ ಸಾಗಿಸಿದ ಘಟನೆ ನಡೆದಿದೆ. ಅತ್ರಾ ರೈಲ್ವೆ ಸ್ಟೇಶನ್ ಬಳಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಪೊಲೀಸರ ಮಾಹಿತಿ ಮೇರೆಗೆ ಕುಟುಂಬದವರು ಸ್ಥಳಕ್ಕಾಗಮಿಸಿದ್ರು.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲು ವಾಹನವೇ ಸಿಕ್ಕಿರಲಿಲ್ಲ. ರೈಲ್ವೆ ಪೊಲೀಸರು ಆಸ್ಪತ್ರೆಗೆ ಕರೆ ಮಾಡಿ ಆ್ಯಂಬ್ಯುಲೆನ್ಸ್ ಕಳಿಸುವಂತೆ ಕೇಳಿದ್ದಾರೆ, ಆದ್ರೆ ಯಾವ ಆಸ್ಪತ್ರೆಯವರೂ ಆ್ಯಂಬ್ಯುಲೆನ್ಸ್ ಕಳುಹಿಸಲು ಒಪ್ಪಿಲ್ಲ.

ಅಲ್ಲಿ ಬೇರೆ ಯಾವುದೇ ವಾಹನದ ವ್ಯವಸ್ಥೆಯೂ ಇಲ್ಲದೇ ಇದ್ದಿದ್ರಿಂದ ಆ ಬಡ ಕುಟುಂಬ ಸೈಕಲ್ ರಿಕ್ಷಾದಲ್ಲಿ ಮೃತದೇಹವನ್ನು ಹೇರಿಕೊಂಡು ಆಸ್ಪತ್ರೆಗೆ ಬಂದಿದೆ. ಮಾರ್ಗಮಧ್ಯೆ ಎಸ್ಪಿ, ಡಿಐಜಿ ಹೀಗೆ ಹಲವು ಅಧಿಕಾರಿಗಳು ಮತ್ತು ವಿಐಪಿಗಳ ನಿವಾಸಗಳು ಎದುರಾದ್ವು.

ಆದ್ರೆ ಈ ರೀತಿ ಶವ ಕೊಂಡೊಯ್ತಾ ಇದ್ರೂ ಬಡ ಕುಟುಂಬದ ಕಷ್ಟವನ್ನು ಯಾರೂ ಆಲಿಸಿಲ್ಲ. ಆಸ್ಪತ್ರೆಗಳಿಂದ ಸರಿಯಾದ ಪ್ರತಿಕ್ರಿಯೆ ಸಿಗದೇ ಇದ್ದಿದ್ರಿಂದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಟೋದಲ್ಲಿ ಕೊಂಡೊಯ್ಯುವಂತೆ ತಾವೇ ಸೂಚಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...