alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ಪಿ ಅಭ್ಯರ್ಥಿ ವಿರುದ್ಧ ಎಫ್ ಐಆರ್ ದಾಖಲು : ಅಖಿಲೇಶ್ ಬಣಕ್ಕೆ ತಲೆನೋವು

sp-mla-3-580x395

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಅಬ್ಬರದ ಪ್ರಚಾರದಲ್ಲಿ ನಿರತರಾಗಿರುವ ನಾಯಕರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವ ಎಸ್ಪಿ ನಾಯಕ ಅಖಿಲೇಶ್ ಯಾದವ್ ಗೆ ಹಿನ್ನಡೆಯಾಗುವ ಘಟನೆಯೊಂದು ನಡೆದಿದೆ. ಎಸ್ಪಿ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಸುಲ್ತಾನಪುರ ವಿಧಾನಸಭಾ ಕ್ಷೇತ್ರದಿಂದ ಎಸ್ಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಶಾಸಕ ಅರುಣ್ ವರ್ಮಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಅರುಣ್ ವರ್ಮಾ ಸೇರಿದಂತೆ 8 ಮಂದಿ ವಿರುದ್ಧ ದೂರು ದಾಖಲಾಗಿದೆ. ನಾಲ್ಕು ವರ್ಷಗಳ ಹಿಂದೆ ಅರುಣ್ ವರ್ಮಾ ಸೇರಿದಂತೆ 8 ಮಂದಿ ವಿರುದ್ಧ ಗ್ಯಾಂಗ್ ರೇಪ್ ಆರೋಪ ಕೇಳಿಬಂದಿತ್ತು. ಈಗ ಗ್ಯಾಂಗ್ ರೇಪ್ ಗೊಳಗಾಗಿದ್ದ ಹುಡುಗಿಯ ಶವ ಸಿಕ್ಕಿದೆ. ಮನೆಯಿಂದ ಸ್ವಲ್ಪ ದೂರದಲ್ಲಿರುವ ಪಂಚಾಯತ್ ಕಚೇರಿ ಬಳಿ ಯುವತಿಯ ಶವ ಸಿಕ್ಕಿದೆ.

ಮನೆ ಬಳಿ ಶಾಸಕ ಪಡೆಯ ದಂಡು ನಿಂತಿತ್ತು ಎಂದು ಹುಡುಗಿ ತಂದೆ ಆರೋಪ ಮಾಡಿದ್ದಾರೆ. ಆದ್ರೆ ಇದು ರಾಜಕೀಯ ಪಿತೂರಿ ಎಂದಿದ್ದಾರೆ ಶಾಸಕರು. ಹುಡುಗಿಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. 2013ರಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಇದೇ 21ರಂದು ಪ್ರಕರಣದ ತೀರ್ಪು ಹೊರಬರಬೇಕಿತ್ತು. ಎರಡು ತಿಂಗಳ ಹಿಂದಷ್ಟೇ ಹುಡುಗಿಗೆ ನೀಡಿದ್ದ ರಕ್ಷಣೆಯನ್ನು ವಾಪಸ್ ಪಡೆಯಲಾಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...