alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುಮಾನ ಮೊತ್ತವನ್ನು ಅತ್ಯಾಚಾರ ಸಂತ್ರಸ್ಥೆಗೆ ನೀಡಿದ ಖಾಕಿಗಳು

ಉತ್ತರ ಪ್ರದೇಶದ ಮಹೋಬಾ ನಗರದಲ್ಲಿ ಅತ್ಯಾಚಾರಿಯೊಬ್ಬನನ್ನು ಹಿಡಿದ ಐವರು ಪೊಲೀಸರಿಗೆ ನಗದು ಬಹುಮಾನ ನೀಡಲಾಗಿತ್ತು.  ಆ ಹಣವನ್ನು ಪೊಲೀಸರು ಅತ್ಯಾಚಾರ ಸಂತ್ರಸ್ಥ ಬಾಲಕಿಗೆ ನೀಡಿದ್ದಾರೆ. ಈ ಮೂಲಕ ಬಾಲಕಿಯ ಮನೆಯವರಿಗೆ ಶೌಚಾಲಯ ಕಟ್ಟಿಸಲು ನೆರವಾಗಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಬೆಳಗಿನ ಜಾವ 3 ಗಂಟೆ ವೇಳೆಗೆ ಮೂತ್ರ ವಿಸರ್ಜನೆಗೆ ಹೋಗಿದ್ದಾಗ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಇನ್ಸ್ ಪೆಕ್ಟರ್ ವಿಕ್ರಂ ಆದಿತ್ಯ ಸಿಂಗ್ ನೇತೃತ್ವದ ತಂಡ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿತ್ತು.

ಕೃತ್ಯ ನಡೆದು 2 ದಿನಗಳೊಳಗಾಗಿ ಕಾಮುಕ ಸಿಕ್ಕಿಬಿದ್ದಿದ್ದ. ಎನ್ ಜಿ ಓ ಹಾಗೂ ಶಾಸಕ ರಾಜೇಶ್ ಗೋಸ್ವಾಮಿ ಸೇರಿ ಪೊಲೀಸರಿಗೆ ತಲಾ 10,100 ರೂಪಾಯಿ ಬಹುಮಾನ ನೀಡಿದ್ದರು. ಶೌಚಾಲಯ ಕಟ್ಟಿಸಲು ಆ ಹಣವನ್ನು ಪೊಲೀಸರು ಬಾಲಕಿಯ ತಂದೆಗೆ ನೀಡಿದ್ದಾರೆ.

ಬಾಲಕಿ ಒಂಟಿಯಾಗಿ ಮೂತ್ರ ವಿಸರ್ಜನೆಗಾಗಿ ಹೊರಗೆ ಹೋಗಿದ್ಲು. ಮನೆಯಲ್ಲಿ ಶೌಚಾಲಯ ಇಲ್ಲದೇ ಇದ್ದಿದ್ರಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಹಾಗಾಗಿ ಪೊಲೀಸರು ಈಗ ಟಾಯ್ಲೆಟ್ ಕಟ್ಟಿಸಲು ಸಹಾಯ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...