alex Certify
ಕನ್ನಡ ದುನಿಯಾ       Mobile App
       

Kannada Duniya

150 ಪ್ರಕರಣ ಭೇದಿಸಿದ್ದ ಪೊಲೀಸ್ ಡಾಗ್ ಇನ್ನಿಲ್ಲ….

ಹೆಸರು ಟೈಗರ್, ಈ ಶ್ವಾನ ಹುಲಿಗಿಂತ ಕಡಿಮೆ ಏನಿಲ್ಲ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿದ್ದ ಬೆಸ್ಟ್ ನಾಯಿ ಅಂದ್ರೆ ಟೈಗರ್. 14 ವರ್ಷಗಳ ವೃತ್ತಿ ಬದುಕಿನಲ್ಲಿ ಟೈಗರ್ ಸುಮಾರು 150 ಪ್ರಕರಣಗಳನ್ನು ಭೇದಿಸಿದ್ದ. ಶ್ವಾನಗಳಿಗೆ ಕೊಡಬಹುದಾದ ಅತ್ಯುನ್ನತ ಹುದ್ದೆ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಬಡ್ತಿ ಪಡೆದಿದ್ದ.

ಕಾಡು ಮೇಡು ಎಲ್ಲೇ ಆಗಿರಲಿ ಸಾಕ್ಷ್ಯಗಳನ್ನು, ಮೃತದೇಹಗಳನ್ನು ಕ್ಷಣಮಾತ್ರದಲ್ಲಿ ಹುಡುಕುತ್ತಿದ್ದ ಟೈಗರ್. ಜನವರಿ 17ರಂದು ಈ ಸಾಹಸಿ ಪೊಲೀಸ್ ನಾಯಿ ಕೊನೆಯುಸಿರೆಳೆದಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಟೈಗರ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

2003ರ ಜೂನ್ 26ರಂದು ಹೈದ್ರಾಬಾದ್ ನ ಕ್ಲಬ್ ಒಂದರಿಂದ ಈ ಲ್ಯಾಬ್ರೆಡಾರ್ ನಾಯಿಯನ್ನು ತರಲಾಗಿತ್ತು. ಪೊಲೀಸ್ ಇಲಾಖೆ ಸೇರಿದಾಗ ಟೈಗರ್ ಇನ್ನೂ 11 ತಿಂಗಳ ಮರಿ. 36 ವಾರಗಳ ನಿರಂತರ ತರಬೇತಿಯ ಬಳಿಕ ಸಾಹಸಿ ಶ್ವಾನವಾಗಿ ಅದು ರೂಪುಗೊಂಡಿತ್ತು.

ಸಾಕ್ಷ್ಯಗಳನ್ನು ಹುಡುಕುವುದು, ಬಾಂಬ್, ಸ್ಫೋಟಕಗಳನ್ನು ಪತ್ತೆ ಮಾಡುವುದು, ನಾರ್ಕೋಟಿಕ್ಸ್ ಪತ್ತೆ, ರಕ್ಷಣಾ ಕಾರ್ಯಾಚರಣೆ, ಗಾರ್ಡ್ ಟ್ರೈನಿಂಗ್ ಹೀಗೆ ಎಲ್ಲಾ ಬಗೆಯ ತರಬೇತಿಯನ್ನೂ ಟೈಗರ್ ಪಡೆದಿತ್ತು. ಶಾಮ್ಲಿ ಮತ್ತು ಮುಜಫರ್ ನಗರದಲ್ಲಿ ನಡೆಯೋ ಪ್ರಕರಣಗಳನ್ನೆಲ್ಲ ಈ ಶ್ವಾನವೇ ಭೇದಿಸುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...