alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರ್ಣಾ ಯಾದವ್ ಗೋ ಶಾಲೆಗೆ ಯೋಗಿ ಭೇಟಿ

yogi1_za1zkzp

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ನಡೆಸುತ್ತಿರುವ ಗೋ ಶಾಲೆಗೆ ಭೇಟಿ ನೀಡಿದ್ದಾರೆ. ಕನ್ಹಾ ಪಾರ್ಕ್ ಹೆಸರಿನ ಈ ಗೋಶಾಲೆ ಲಕ್ನೋದ ಸರೋಜಿನಿ ನಗರದಲ್ಲಿದೆ.

ಹಿಂದಿನ ವಾರ ಸಿಎಂ ಭೇಟಿ ಮಾಡಿದ್ದ ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ ಪ್ರತೀಕ್ ಹಾಗೂ ಸೊಸೆ, ಯೋಗಿಯವರನ್ನು ಗೋಶಾಲೆಗೆ ಆಹ್ವಾನಿಸಿದ್ದರು. ಶುಕ್ರವಾರ ಗೋಶಾಲೆಗೆ ಭೇಟಿ ನೀಡಿದ ಸಿಎಂ ಜಾನುವಾರುಗಳಿಗೆ ಹುಲ್ಲು ನೀಡಿದ್ರು.

ಅಪರ್ಣಾ ಯಾದವ್ ಎನ್ ಜಿ ಓ ಮೂಲಕ ಈ ಗೋಶಾಲೆ ನಡೆಸುತ್ತಿದ್ದಾರೆ. ಬೀದಿಬದಿಯಲ್ಲಿರುವ ವಾರಸುದಾರರಿಲ್ಲದ ಜಾನುವಾರು ಹಾಗೂ ನಾಯಿಗಳನ್ನು ಇಲ್ಲಿ ಸಾಕಲಾಗ್ತಾ ಇದೆ. ಕೆಲ ದಿನಗಳ ಹಿಂದೆ ಅಪರ್ಣಾ, ಪ್ರಧಾನ ಮೋದಿಯವರನ್ನೂ ಹೊಗಳಿದ್ದರು. ಈ ಬಾರಿ ಚುನಾವಣೆಯಲ್ಲಿ ನಿಂತು ರೀಟಾ ಬಹುಗುಣ ಎದುರು ಸೋಲುಂಡಿರುವ ಅಪರ್ಣಾ ನಡೆ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...