alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಕ್ಕಾಗಿ ಮೊದಲ ಬಾರಿ ಟೀ ಶರ್ಟ್ ಧರಿಸಿದ ಯೋಗಿ

ವಿಶ್ವದೆಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಲಕ್ನೋದಲ್ಲಿ ಯೋಗ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಯೋಗ ಕಾರ್ಯಕ್ರಮದಲ್ಲಿ ಯೋಗಿ ಬಟ್ಟೆ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಸದಾ ಕಾವಿ ಬಣ್ಣದ ಕುರ್ತಾ ಹಾಗೂ ಧೋತಿ ಧರಿಸುತ್ತಿದ್ದ ಯೋಗಿ ಇಂದು ಟೀ ಶರ್ಟ್ ನಲ್ಲಿ ಯೋಗ ಮಾಡಿದ್ರು. ಹಾಗೆ ರಾಜನಾಥ್ ಸಿಂಗ್ ಕೂಡ ಟೀ ಶರ್ಟ್, ಪ್ಯಾಂಟ್ ನಲ್ಲಿ ಯೋಗಾಸನ ಮಾಡಿದ್ರು. ಎಲ್ಲ ಆಸನಗಳನ್ನು ಸುಲಭವಾಗಿ, ನಿಖರ ಭಂಗಿಯಲ್ಲಿ ಮಾಡಿ ಗಮನ ಸೆಳೆದ್ರು.

ಇಬ್ಬರು ನಾಯಕರು ಸುಮಾರು ಒಂದೂವರೆ ಗಂಟೆಗಳ ಕಾಲ ವೇದಿಕೆ ಮೇಲಿದ್ದರು. 40 ನಿಮಿಷಗಳ ಕಾಲ ಯೋಗ ಮಾಡಿದ್ರು. ಇಬ್ಬರು ನಾಯಕರೂ ಯೋಗದ ಬಗ್ಗೆ ಮಾಹಿತಿ ನೀಡಿದ್ರು. ಡೆಹ್ರಾಡೂನ್ ನಲ್ಲಿ ಪಿಎಂ ಮೋದಿ ಯೋಗ ಮಾಡಿದ್ರು. ದೇಶದಾದ್ಯಂತ ಯೋಗ ಕಾರ್ಯಕ್ರಮಗಳು ನಡೆದಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...