alex Certify
ಕನ್ನಡ ದುನಿಯಾ       Mobile App
       

Kannada Duniya

ತೋಟದಲ್ಲಿ 40 ಹಸುಗಳನ್ನು ಹೂತಿಟ್ಟಿದ್ದ ವೈದ್ಯಾಧಿಕಾರಿ

cow

ಉತ್ತರಪ್ರದೇಶದ ವೈದ್ಯಾಧಿಕಾರಿಯೊಬ್ಬರ ಫಾರ್ಮ್ ಹೌಸ್ ನಲ್ಲಿ ಹೂತಿಟ್ಟಿದ್ದ 40 ಹಸುಗಳ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿಯಾಗಿರುವ ಜೆ.ಎನ್. ಮಿಶ್ರಾ ಅವರ ಫಾರ್ಮ್ ಹೌಸ್ ಮೇಲೆ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ದಾಳಿ ನಡೆಸಿತ್ತು.

ಫಾರ್ಮ್ ಹೌಸ್ ನಲ್ಲಿ ಸುಮಾರು 35-40 ಹಸುಗಳ ಮೃತದೇಹದ ಅವಶೇಷಗಳು ದೊರೆತಿವೆ, ಜೊತೆಗೆ ಕೆಲವೊಂದು ಔಷಧಗಳು ಮತ್ತು ರಾಸಾಯನಿಕಗಳು ಕೂಡ ಪತ್ತೆಯಾಗಿವೆ. ಸದ್ಯ ಫಾರ್ಮ್ ಹೌಸ್ ಗೆ ಬೀಗ ಜಡಿಯಲಾಗಿದ್ದು, ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಹಸುವಿನ ಮೃತದೇಹದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಹಸುಗಳ ಪೋಸ್ಟ್ ಮಾರ್ಟಂ ಕೂಡ ನಡೆಯುತ್ತಿದ್ದು, ವಿಷ ಹಾಕಿ ಕೊಲ್ಲಲಾಗಿದ್ಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ವೈದ್ಯಾಧಿಕಾರಿ ಜೆ.ಎನ್. ಮಿಶ್ರಾ ವಿರುದ್ಧ ಹಿಂದು ಯುವ ವಾಹಿನಿಯ ಕಾರ್ಯಕರ್ತರು ಕೂಡ ದೂರು ದಾಖಲಿಸಿದ್ದಾರೆ.

ಆದ್ರೆ ಮಿಶ್ರಾ ಹಸುಗಳನ್ನು ಹತ್ಯೆ ಮಾಡಿಲ್ಲ ಅಂತಾ ವಾದಿಸಿದ್ದಾನೆ. ಮೊದಲು ತಾನು 9 ಹಸುಗಳನ್ನು ಸಾಕಿದ್ದೆ. ಬರಬರುತ್ತಾ ಜನರು ಹಸುಗಳನ್ನು ಸಾಕಲಾಗದೆ ನನಗೆ ತಂದು ಕೊಟ್ಟಿದ್ರು. ಸತ್ತಮೇಲೆ ಅವುಗಳನ್ನು ಹೂತು ಹಾಕಿದ್ದೆ ಅಂತಾ ಹೇಳಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...