alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗ: 2 ಕ್ಷೇತ್ರದಲ್ಲೂ ಸೋಲು

ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. ಬಿಜೆಪಿ ಹಾಗೂ ವಿರೋಧ ಪಕ್ಷಗಳ ಚುನಾವಣಾ ಗುದ್ದಾಟದಲ್ಲಿ ವಿರೋಧಿ ಬಣದ ಬಲ ಹೆಚ್ಚಾಗಿದೆ. ಮುಜಾಫರ್ನಗರ ದಂಗೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳ ಮೇಲಿನ ಮೊಕದ್ದಮೆ ತೆಗೆದು ಹಾಕುವುದಾಗಿ ಯೋಗಿ ಸರ್ಕಾರ ಭರವಸೆ ನೀಡಿತ್ತು. ಆದ್ರೂ ಮತದಾರರ ಮನಸ್ಸು ಕರಗಲಿಲ್ಲ. ಉಪ ಚುನಾವಣೆಯಲ್ಲಿ ಮೋದಿ ಪಡೆಗೆ ಗೆಲುವು ಸಿಗಲಿಲ್ಲ.

ನೂರ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಂಡಿಯೂರಿದೆ. ಎಸ್ಪಿ ಇದೇ ಮೊದಲ ಬಾರಿ ನೂರ್ಪುರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಖಾತೆ ತೆರೆದಿದೆ. ಎಸ್ಪಿಯ ನಯಿಮುಲ್ ಹಸನ್, ಬಿಜೆಪಿ ಸ್ಪರ್ಧಿ ಅವನಿ ಸಿಂಗ್ ರನ್ನು 6211 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಇನ್ನು ಪ್ರತಿಷ್ಠೆಯ ಕಣವಾಗಿದ್ದ ಕೈರಾಣ ಲೋಕಸಭೆ ಕ್ಷೇತ್ರದಲ್ಲೂ ಬಿಜೆಪಿ ಸೋಲುಂಡಿದೆ. 2014ರಲ್ಲಿ ಐದು ಲಕ್ಷಕ್ಕಿಂತಲೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಬಾರಿ ಭಾರೀ ಹೊಡೆತ ಬಿದ್ದಿದೆ. ಬಿಎಸ್ಪಿ, ಎಸ್ಪಿ, ಕಾಂಗ್ರೆಸ್ ಬೆಂಬಲದೊಂದಿಗೆ ಕಣಕ್ಕಿಳಿದ ಆರ್ ಎಲ್ ಡಿ ಗೆಲುವಿನ ನಗೆ ಬೀರಿದೆ.

ಆರ್ ಎಲ್ ಡಿ ಅಭ್ಯರ್ಥಿ ತಬಸುಮ್ ಹಸನ್ ಗೆ 4,21,145 ಮತ ಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಮೃಗಾಂಗ ಸಿಂಗ್ ಗೆ 3,71,691 ಮತ ಬಂದಿದೆ. 49,454 ಮತಗಳಿಂದ ತಬಸುಮ್ ಹಸನ್ ಗೆಲುವು ಸಾಧಿಸಿದ್ದಾರೆ. ಆರ್ ಎಲ್ ಡಿ ಗೆಲುವಿಗೆ ಮುಖ್ಯ ಕಾರಣ ಜಾತಿ ಎನ್ನಲಾಗ್ತಿದೆ. ಈ ಪ್ರದೇಶದಲ್ಲಿ ಮುಸ್ಲಿಂ ಜನಾಂಗದವರ ಸಂಖ್ಯೆ ಹೆಚ್ಚಿದೆ. ಜಾತಿ ಸಮೀಕರಣ ಮಾಡಿಯೇ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಪಕ್ಷಗಳು ಆರ್ ಎಲ್ ಡಿ ಗೆ ಬೆಂಬಲ ನೀಡಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...