alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಿಜೆಪಿ ನಾಯಕಿಯ ವಿಡಿಯೋ

ಉತ್ತರ ಪ್ರದೇಶದ ಅಲಿಗಢದಲ್ಲಿ ಮುಸ್ಲಿಂ ಗೆಳೆಯನ ಜೊತೆಗೆ ಚಹಾ ಕುಡಿದಿದ್ದಾಳೆ ಅನ್ನೋ ಕಾರಣಕ್ಕೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಗೀತಾ ವರ್ಶ್ನೆ ಯುವತಿಯ ಕಪಾಳಕ್ಕೆ ಬಾರಿಸಿದ್ದಾಳೆ. ಈ ವಿಡಿಯೋ ಕೂಡ ವೈರಲ್ ಆಗಿದೆ.

ಯುವತಿ ಮತ್ತಾಕೆಯ ಗೆಳೆಯ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿದ್ರು. ಅಲ್ಲಿಗೆ ಬಂದ ಹಿಂದು ಜಾಗರಣ್ ಮಂಚ್ ಕಾರ್ಯಕರ್ತರು ಅವರನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಯುವತಿಗೆ ಬೈಯ್ಯುತ್ತ ಪದೇ ಪದೇ ಸಂಗೀತಾ ಆಕೆಯ ಕಪಾಳಕ್ಕೆ ಬಾರಿಸಿದ್ದಾಳೆ.

ಅಷ್ಟಕ್ಕೇ ಸುಮ್ಮನಾಗದೆ ಯುವತಿಯ ತಂದೆಯನ್ನು ಕರೆಸಿ ಆತನ ಬಳಿಯೂ ಕಪಾಳ ಮೋಕ್ಷ ಮಾಡುವಂತೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೂಚಿಸಿದ್ದಾಳೆ. ತಾನು ಪ್ರಾಪ್ತ ವಯಸ್ಸಿಗೆ ಬಂದಿದ್ದು, ಆತ ತನ್ನ ಗೆಳೆಯ. ಹಲವು ವರ್ಷಗಳಿಂದ ತಾವಿಬ್ಬರೂ ಪ್ರೀತಿಸುತ್ತಿದ್ದೇವೆ ಅಂತಾ ಆ ಯುವತಿ ಹೇಳಿದ್ದಾಳೆ.

ಬೇರೆ ಧರ್ಮದ ಯುವಕನೊಂದಿಗೆ ಕುಳಿತಿದ್ದಕ್ಕಾಗಿ ಯುವತಿಗೆ ಹೊಡೆದಿದ್ದೇನೆ ಅಂತಾ ಬಿಜೆಪಿ ನಾಯಕಿ ಸಮರ್ಥಿಸಿಕೊಂಡಿದ್ದಾಳೆ. ಇನ್ನೊಂದೆಡೆ ಯುವತಿಯ ತಂದೆ ಕೂಡ ಬಿಜೆಪಿ ನಾಯಕಿ ಹಾಗೂ ಇತರ ಹಿಂದು ಜಾಗರಣ ಮಂಚ್ ಕಾರ್ಯಕರ್ತರ ವಿರುದ್ಧ ದೂರು ನೀಡಲು ಮುಂದಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...