alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮಂಟಪದಲ್ಲೇ ನಡೀತು ವಿಚಿತ್ರ ಘಟನೆ

ನವದೆಹಲಿ: ಮದುವೆ ಮಂಟಪದಲ್ಲಿ ಎಂತೆಂತಹ ಸ್ವಾರಸ್ಯಕರ ಘಟನೆಗಳು ನಡೆದಿರುವ ಬಗ್ಗೆ ಸಾಮಾನ್ಯವಾಗಿ ಓದಿರುತ್ತೀರಿ. ಅಂತಹುದೇ ವಿಶೇಷ ಘಟನೆಯೊಂದರ ಮಾಹಿತಿ ಇಲ್ಲಿದೆ.

ಮದುವೆ ಮಂಟಪದಲ್ಲಿ ವರನೊಂದಿಗೆ ಕುಳಿತಿದ್ದ ವಧುವಿಗೆ ಆಕೆಯ ಪ್ರಿಯಕರ ದೂರದಿಂದಲೇ ಹಾರ ಹಾಕಿದ್ದಾನೆ. ವರನ ಪಕ್ಕದಲ್ಲಿದ್ದ ವಧು ಎದ್ದು ಬಂದು ಪ್ರಿಯಕರನಿಗೆ ಹಾರ ಹಾಕಿದ್ದು, ಅಲ್ಲಿದ್ದವರೆಲ್ಲಾ ಸೇರಿ ಪ್ರಿಯಕರನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಮದುವೆಗೆ ಬಂಧು ಬಾಂಧವರೆಲ್ಲಾ ಸೇರಿದ್ದು, ಇನ್ನೇನು ವರ ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಬೈಕ್ ನಲ್ಲಿ ಬಂದ ಪ್ರಿಯಕರ ದೂರದಿಂದಲೇ ಹಾರವನ್ನು ಎಸೆದಿದ್ದು, ಅದು ವಧು ಕೊರಳಿಗೆ ಬಿದ್ದಿದೆ. ನಂತರ ವಧುವೂ ಹಾರ ಹಾಕಿದ ಕಾರಣ ಮದುವೆ ಮುರಿದು ಬಿದ್ದಿದೆ.

ವಧು ಹಾಗೂ ಹಾರ ಹಾಕಿದ ಯುವಕ ಒಟ್ಟಿಗೆ ಓದುತ್ತಿದ್ದು, ಅವರ ನಡುವೆ ದೈಹಿಕ ಸಂಬಂಧವಿತ್ತು. ಬೇರೆ ಜಾತಿಯವರಾಗಿದ್ದ ಕಾರಣ ಮದುವೆಗೆ ಪೋಷಕರು ಒಪ್ಪಿರಲಿಲ್ಲ. ಆದರೆ, ಯುವತಿ ಮದುವೆ ನಡೆಯುತ್ತಿದ್ದ ಮಂಟಪಕ್ಕೆ ಬಂದ ಪ್ರಿಯಕರ ಇಂತಹ ಕೃತ್ಯವೆಸಗಿ ಧರ್ಮದೇಟು ತಿಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...