alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೇ ಬಂದ ಪೊಲೀಸರನ್ನು ವಾಂಟೆಡ್ ಕ್ರಿಮಿನಲ್ ಯಾಮಾರಿಸಿದ್ದು ಹೀಗೆ

ಶನಿವಾರ ಪೊಲೀಸರ ತಂಡ ಸಹರನ್ಪುರದ ಫತೇಪುರ ಗ್ರಾಮದಲ್ಲಿರೋ ಭೀಮ್ ಆರ್ಮಿ ರಾಷ್ಟ್ರಾಧ್ಯಕ್ಷ ವಿನಯ್ ರತನ್ ಮನೆಗೆ ಬಂದಿತ್ತು. ಹಿಂಸಾಚಾರ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ರತನ್, ತಲೆಮರೆಸಿಕೊಂಡಿದ್ದ.

ಆತನ ಬಂಧನಕ್ಕೆ ಕೋರ್ಟ್ ವಾರೆಂಟ್ ಹೊರಡಿಸಿತ್ತು. ಅದನ್ನು ರತನ್ ಮನೆಯ ಗೋಡೆಗೆ ಅಂಟಿಸಿದ ಪೊಲೀಸರು ಆತನ ತಾಯಿ ಹಾಗೂ ಸಹೋದರನೆಂದು ಹೇಳಿಕೊಂಡ ಸಚಿನ್ ಎಂಬಾತನೊಂದಿಗೆ ಮಾತನಾಡಿದ್ರು.

ಅಷ್ಟಕ್ಕೂ ಪೊಲೀಸರು ಮಾತನಾಡಿದ್ದು ಕ್ರಿಮಿನಲ್ ಸಹೋದರನ ಜೊತೆಗಲ್ಲ, ರತನ್ ಜೊತೆಗೆ. ಅದು ಖಾಕಿಗಳಿಗೆ ಗೊತ್ತೇ ಆಗಿರಲಿಲ್ಲ. ಇಬ್ಬರು ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ನಾಲ್ವರು ಪೇದೆಗಳು ಕೋರ್ಟ್ ಆರ್ಡರ್ ಹಿಡಿದು ರತನ್ ಮನೆಗೆ ಬಂದಿದ್ರು.

ಆಗ ರತನ್ ಮನೆಯಲ್ಲೇ ಇದ್ದ, ಆದ್ರೆ ಅವನ ತಾಯಿ ಆತ ತನ್ನ ಕಿರಿಮಗ ಸಚಿನ್ ಅಂತಾ ಸುಳ್ಳು ಹೇಳಿದ್ದಳು. ಪೊಲೀಸರು ರತನ್ ಫೋಟೋ ಕೂಡ ನೋಡಿರಲಿಲ್ಲ. ಹಾಗಾಗಿ ಅಲ್ಲಿದ್ದವನೇ ಆರೋಪಿ ಅನ್ನೋದು ಅವರ ಅರಿವಿಗೇ ಬಂದಿಲ್ಲ.

ರತನ್ ಮತ್ತವನ ತಾಯಿ ತಮಗೆ ಚಳ್ಳೆಹಣ್ಣು ತಿನ್ನಿಸಿರೋದು ಗೊತ್ತಾಗ್ತಿದ್ದಂತೆ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ರು. ಅವನ ತಲೆ ತಂದುಕೊಟ್ಟವರಿಗೆ 12,000 ರೂಪಾಯಿ ಬಹುಮಾನವನ್ನೂ ಘೋಷಿಸಿದ್ರು. ಇದರ ಬೆನ್ನಲ್ಲೇ ನಿನ್ನೆ ರತನ್ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...