alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂ. ನೋಟಿನ ಕಂತೆ ಕೊಟ್ಟು ಕಾರು ಕೊಂಡವರ ಅಸಲಿಯತ್ತು!

note-10

ಉತ್ತರಪ್ರದೇಶದ ಸಹರನ್ಪುರ ಜಿಲ್ಲೆಯ ನಾಲ್ವರು ಬ್ಯಾಂಕ್ ಲೂಟಿ ಮಾಡಿ 10 ರೂಪಾಯಿ ನೋಟುಗಳ ಕಂತೆ ಕೊಟ್ಟು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಿದ್ದಾರೆ.

ನಾಸಿರ್, ರಾಕೇಶ್, ಅಫ್ಜಲ್ ಮತ್ತು ಟೀಟು ಜೊತೆಯಾಗಿ ಈ ದುಷ್ಕೃತ್ಯ ಎಸಗಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ 10 ಲಕ್ಷ ರೂಪಾಯಿ ಲೂಟಿ ಮಾಡಿದ್ದಾರೆ, ಅದರಲ್ಲಿ ಎಲ್ಲವೂ 10 ಮತ್ತು 20 ರೂಪಾಯಿ ನೋಟುಗಳಿದ್ವು. ಆ ಹಣದಿಂದ ನಾಲ್ವರೂ ಸೇರಿ ಪ್ರತಿದಿನ ರಾತ್ರಿ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ.

ಈ ಪೈಕಿ ನಾಸಿರ್ ಎಂಬಾತ ಸೆಕೆಂಡ್ ಹ್ಯಾಂಡ್ ಕಾರು ಕೊಂಡುಕೊಂಡಿದ್ದ, ಆತ 10 ರೂಪಾಯಿ ನೋಟುಗಳನ್ನೇ ಕೊಟ್ಟು ಕಾರು ತಂದಿದ್ದಾನೆ ಅನ್ನೋದು ಊರ ತುಂಬಾ ಸುದ್ದಿಯಾಗಿತ್ತು. ಈ ವಿಷಯ ಕೇಳಿ ಗುಮಾನಿ ಬಂದಿದ್ರಿಂದ ಪೊಲೀಸರು ಅವರ ಮೇಲೊಂದು ಕಣ್ಣಿಟ್ಟಿದ್ರು. ಕೊನೆಗೆ ನಾಸಿರ್ ನನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಬ್ಯಾಂಕ್ ಲೂಟಿ ಮಾಡಿರೋ ವಿಚಾರ ಬಾಯ್ಬಿಟ್ಟಿದ್ದಾನೆ. ಅವರು ಕದ್ದು ತಂದಿದ್ದ ಹಣದಲ್ಲಿ 5 ಲಕ್ಷ ರೂಪಾಯಿ 10 ರೂಪಾಯಿ ನೋಟುಗಳಲ್ಲಿತ್ತು, ಉಳಿದ 5 ಲಕ್ಷ 20 ರೂಪಾಯಿ ನೋಟುಗಳು. ಸದ್ಯ ನಾಸಿರ್ ನನ್ನು ಬಂಧಿಸಿ ಕಾರು ಹಾಗೂ 50,000 ರೂ. ವಶಪಡಿಸಿಕೊಂಡಿರೋ ಪೊಲೀಸರು ಉಳಿದವರಿಗಾಗಿ ಬಲೆ ಬೀಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...