alex Certify
ಕನ್ನಡ ದುನಿಯಾ       Mobile App
       

Kannada Duniya

ಹೆದ್ದಾರಿ ಬಳಿ ಬಿದ್ದಿತ್ತು ಹಳೆ ನೋಟು ತುಂಬಿದ್ದ ನಾಲ್ಕು ಚೀಲ

cash_ovptcmu

ಉತ್ತರ ಪ್ರದೇಶದ ಉನ್ನಾವೋ ಹೆದ್ದಾರಿ ಬಳಿ 500-1000 ಮುಖಬೆಲೆಯ ಹಳೆ ನೋಟುಗಳು ತುಂಬಿದ್ದ ನಾಲ್ಕು ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳೆ ನೋಟುಗಳನ್ನು ಕತ್ತರಿಸಿ ಚೀಲದಲ್ಲಿ ತುಂಬಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ನಾಲ್ಕು ಚೀಲದಲ್ಲಿ ತುಂಬಿದ್ದ ಹಳೆ ನೋಟುಗಳನ್ನು ನೋಡಲು ಜನಸಾಗರವೇ ನೆರೆದಿತ್ತು ಎನ್ನಲಾಗಿದೆ. ಹಳೆ ನೋಟಿನ ಚೀಲ ನೋಡಿ ಸ್ಥಳೀಯ ಪೊಲೀಸರಿಗೆ ಗ್ರಾಮಸ್ಥರು ಕರೆ ಮಾಡಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ನೋಟುಗಳು ತುಂಬಿದ್ದ ಚೀಲವನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆಯಲು ಯತ್ನಿಸಿದ್ದಾರೆ. ಆದ್ರೆ ಯಾರು ಹಣ ತುಂಬಿದ ಚೀಲವನ್ನು ಇಲ್ಲಿ ಎಸೆದಿದ್ದಾರೆನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...