alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಇಲ್ಲದೆ ಕಂಗೆಟ್ಟ ಯುವಕರಿಟ್ಟಿದ್ದಾರೆ ಇಂತ ಬೇಡಿಕೆ

ಹರ್ಯಾಣದ ಜಿಂದ್ ಪ್ರದೇಶದ ಯುವಕರು ವಿಭಿನ್ನ ಸಮಸ್ಯೆಗೆ ಸಿಲುಕಿದ್ದಾರೆ. ಆಸ್ತಿ-ಪಾಸ್ತಿ, ಕೈನಲ್ಲಿ ಕೆಲಸವಿದ್ರೂ ಮದುವೆಗೆ ಹುಡುಗಿಯರು ಮಾತ್ರ ಸಿಗ್ತಿಲ್ಲ. ಸಿಕ್ಕ ಕೆಲ ಹುಡುಗಿಯರೂ ಮೋಸ ಮಾಡ್ತಿದ್ದಾರೆ. ದಲ್ಲಾಳಿಗಳು ಹಾಗೂ ಹುಡುಗಿಯರು ಮದುವೆ ನಂತ್ರ ಹಣ, ಬಂಗಾರ ಕದ್ದು ಓಡಿ ಹೋಗ್ತಿದ್ದಾರೆ. ಇದ್ರಿಂದ ಬೇಸತ್ತ ಯುವಕರು ವಿಚಿತ್ರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಹುಡುಗಿಯರ ಮೋಸಕ್ಕೆ ಅಂತ್ಯ ಹಾಡಲು ಯುವಕರು ನಿರ್ಧರಿಸಿದ್ದಾರೆ. ಮದುವೆ ಪ್ರಮಾಣ ಪತ್ರದ ಜೊತೆ ಆಧಾರ್ ಲಿಂಕ್ ಮಾಡುವಂತೆ ಒತ್ತಾಯ ಮಾಡ್ತಿದ್ದಾರೆ. ಮದುವೆ ಪ್ರಮಾಣ ಪತ್ರಕ್ಕೆ ಆಧಾರ್ ಲಿಂಕ್ ಮಾಡಿದ್ರೆ ಹುಡುಗಿಯರು ಮೋಸ ಮಾಡಲು ಸಾಧ್ಯವಿಲ್ಲ ಎಂಬುದು ಯುವಕರ ಅಭಿಪ್ರಾಯ.

ದಲ್ಲಾಳಿಗಳು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ರಾಜ್ಯಗಳಿಂದ ಕಡಿಮೆ ಬೆಲೆಗೆ ಹುಡುಗಿಯರನ್ನು ಖರೀದಿ ಮಾಡಿ ಹರ್ಯಾಣಕ್ಕೆ ಕರೆ ತರ್ತಾರೆ. ಇಲ್ಲಿ 2 ಲಕ್ಷಕ್ಕೂ ಹೆಚ್ಚು ರೂಪಾಯಿ ಪಡೆದು ಮದುವೆ ಮಾಡಿಸ್ತಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಹಣವೂ ಇಲ್ಲ, ಹುಡುಗಿಯೂ ಇಲ್ಲ ಎನ್ನುವಂತಾಗುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...